Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಾಯಾ ಕಾಮತ್ ರವರಿಗೆ ಅಭಿನಂದನೆ 

ಮಣಿಪಾಲ:  ಮಣಿಪಾಲ ಈಶ್ವರನಗರ  ಮಹಾಮಾಯ ಭಜನಾ ಮಂಡಳಿಯ ಅಧ್ಯಕ್ಷರಾದ ಮಾಯಾ ಕಾಮತ್ ರವರ ಹುಟ್ಟು ಹಬ್ಬವನ್ನು  ಆಸರೆ  ಹೊಂಬೆಳಕು ವಿಶೇಷ ಶಾಲೆಯಲ್ಲಿ ಮಂಗಳವಾರ ಆಚರಿಸಲಾಯಿತು.  ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಾಯಾ ಕಾಮತ್ ಅಭಿನಂದಿಸಲಾಯಿತು, ವಿಶೇಷ ಸಾಧನೆ ಗೈದ ಕುಮಾರಿ ಅರ್ಚನಾ ,ಶ್ರೀಮತಿ ನಂದಿನಿ ಶೆಣೈ ರವರನ್ನು ಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಸರೆ ಸೇವಾಶ್ರಮದ ಅಧ್ಯಕ್ಷರಾದ ಜೈ ವಿಠಲ್, ಉಡುಪಿ ಜಿಲ್ಲಾ ಮಹಿಳಾ ಮೋರ್ಚ್ ಅಧ್ಯಕ್ಷೆ ವೀಣಾಶೆಟ್ಟಿ ,  ಜಿಲ್ಲಾ ಪಂಚಾಯತ್ ಸದಸ್ಯೆ ಗಿಂತಾಂಜಲಿ ಸುವರ್ಣ, ವರ್ತಕ ಸಂಘದ ಅಧ್ಯಕ್ಷ ಸಹನ ಶೀಲಾ ಪೈ, ಶ್ರುತಿ ಶೆಣೈ, ಕುಸುಮ ವೆಂಕಟೇಶ್, ಮೋಹಿನಿ ಭಟ್, ಸರೋಜಾ ಶೆಟ್ಟಿಗಾರ, ಕರ್ನಲ್ ಪ್ರಕಾಶ್ಚಂದ್ರ, ಹಾಗು ಅಭಿಮಾನಿಗಳು ಉಪಸ್ಥರಿದ್ದರು.

ಮಹಾಮಾಯ ಭಜನಾ ಮಂಡಳಿಯ ಸದ್ಯಸರಿಂದ ಭಜನಾ ಕಾರ್ಯಕ್ರಮ ಜರಗಿತು ವಿಶೇಷ ಶಾಲಾ ಮಕ್ಕಳಿಗೆ ಸಹಿ ತಿಂಡಿಯೊಂದಿಗೆ ಲಘು ಉಪಹಾರ ನೀಡಿದರು  

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!