Janardhan Kodavoor/ Team KaravaliXpress
24.6 C
Udupi
Thursday, September 29, 2022
Sathyanatha Stores Brahmavara

ಮೊಗವೀರ ಯುವ ಸಂಘಟನೆ (ರಿ.) ಹಿರಿಯಡಕ ಘಟಕದ ಆಡಳಿತ ಕಛೇರಿಗೆ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಂದ್ರ ಸುವರ್ಣ ಘಟಕಕ್ಕೆ ಬೇಟಿ

ಮೊಗವೀರ ಯುವ ಸಂಘಟನೆ (ರಿ.) ಹಿರಿಯಡಕ ಘಟಕದ ಆಡಳಿತ ಕಛೇರಿಗೆ ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಇದರ ಗೌರವಾನ್ವಿತ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಂದ್ರ ಸುವರ್ಣ ಹಿರಿಯಡ್ಕರವರು ಮೊಗವೀರ ಯುವ ಸಂಘಟನೆಯ ಹಿರಿಯಡಕ ಘಟಕಕ್ಕೆ ಬೇಟಿ ನೀಡಿದರು. ದಿನಾಂಕ 30-07-2022ನೇ ಶನಿವಾರ ಸಂಜೆ ಗಂಟೆ 06-00ಕ್ಕೆ ಸರಿಯಾಗಿ ಜಿಲ್ಲಾ ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶಿವರಾಮ ಕೆ. ಎಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವೀಶ್ ಎಸ್. ಕೊರವಡಿ, ಹಾಗೂ ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರುಗಳಾದ ಅಶೋಕ್ ತೆಕ್ಕಟ್ಟೆ, ಜಯಂತ್ ಅಮೀನ್ ಕೋಟಾ, ಮಂಜುನಾಥ್ ಸುವರ್ಣ ಬ್ರಹ್ಮಾವರ ಅವರೊಂದಿಗೆ “ಜಿಲ್ಲಾಧ್ಯಕ್ಷರ ನಡೆ ಘಟಕದ ಕಡೆಗೆ” ಎಂಬ ವಿನೂತನ ಕಾರ್ಯಕ್ರಮದ ಮೂಲಕ ಭೇಟಿ ನೀಡಿದ ಅವರನ್ನು ಹಿರಿಯಡಕ ಘಟಕದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿಶೇಷವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಜಿಲ್ಲಾ ಅಧ್ಯಕ್ಷರು ಹಿರಿಯಡಕ ಘಟಕದ ಕಚೇರಿಯ ಸಂದರ್ಶಕರ ಕೈಪಿಡಿಯಲ್ಲಿ ತಮ್ಮ ಅನಿಸಿಕೆಯನ್ನು ಬರೆದು ಅನಾವರಣಗೊಳಿಸಿದರು. ಹಿರಿಯಡಕ ಘಟಕದ ಇದುವರೆಗಿನ ಸಂಪೂರ್ಣ ಕಾರ್ಯಾಚರಣೆಯ ವರದಿಗಳನ್ನು, ದಾಖಲಾತಿಗಳನ್ನು, ಲೆಕ್ಕಪತ್ರಗಳ ವರದಿಗಳನ್ನು ಪರಿಶೀಲಿಸಿ ಪ್ರಶಂಸಿಸಿದರು. ಕೆಲವು ಪ್ರಮುಖ ಮಾಹಿತಿಗಳನ್ನು, ಮಾರ್ಗದರ್ಶಿ ಸೂತ್ರಗಳನ್ನು ತಿಳಿಯಪಡಿಸಿ ಘಟಕದ ಕಾರ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಪೂರ್ಣ ಭರವಸೆಯನ್ನು ನೀಡಿದರು.

ಜಿಲ್ಲಾಧ್ಯಕ್ಷರಾದ ರಾಜೇಂದ್ರ ಸುವರ್ಣ, ಪ್ರಧಾನ ಕಾರ್ಯದರ್ಶಿ ರವೀಶ್ ಎಸ್. ಕೊರವಡಿ, ಉಪಾಧ್ಯಕ್ಷರುಗಳಾದ ಅಶೋಕ್ ತೆಕ್ಕಟ್ಟೆ, ಜಯಂತ್ ಅಮೀನ್ ಕೋಟಾ, ಮಂಜುನಾಥ್ ಸುವರ್ಣ ಬ್ರಹ್ಮಾವರ ಹಾಗೂ ಯುವ ಪೆನ್ಸಿಲ್ ಆರ್ಟ್ಸ್ ಕಲಾವಿದ ಪ್ರಶಾಂತ್ ಶ್ರೀಯಾನ್, ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಹಿರಿಯಡಕ ಘಟಕಾಧ್ಯಕ್ಷ ಮಹೇಶ್ ಪುತ್ರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾಧ್ಯಕ್ಷರಾದ ರಾಜೇಂದ್ರ ಸುವರ್ಣ, ನಿಕಟಪೂರ್ವ ಅಧ್ಯಕ್ಷರಾದ ಶಿವರಾಮ್ ಕೆ.ಎಮ್, ಪ್ರಧಾನ ಕಾರ್ಯದರ್ಶಿ ರವೀಶ್ ಎಸ್. ಕೊರವಡಿ, ಘಟಕದ ಉಸ್ತುವಾರಿ ಜಿಲ್ಲಾ ಉಪಾಧ್ಯಕ್ಷರಾದ ಅಶೊಕ್ ತೆಕ್ಕಟ್ಟೆ, ಮೊಗವೀರ ಸಂಯುಕ್ತ ಸಭಾ ಬಾರ್ಕೂರು ಇದರ ಅಧ್ಯಕ್ಷರಾದ ಸತೀಶ್ ಅಮೀನ್, ಹಿರಿಯಡಕ ಹದಿನೇಳು ಗ್ರಾಮ್ ಸಭಾ ಒಕ್ಕೂಟದ ಗೌರವಾಧ್ಯಕ್ಷರಾದ ಸುಂದರ್ ಕಾಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯಡಕ ಘಟಕದ ಮಾಜಿ ಅಧ್ಯಕ್ಷರಾದ ನವೀನ್ ಕೆ. ಶೆಟ್ಟಿಬೆಟ್ಟು ಕಾರ್ಯಕ್ರಮ ನಿರೂಪಿಸಿ, ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಕೆ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!