Janardhan Kodavoor/ Team KaravaliXpress
32 C
Udupi
Wednesday, March 3, 2021

ಮೋದಿ ಬಿಗ್ರೇಡ್ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

ಉಡುಪಿ: ಮೋದಿ ಬಿಗ್ರೇಡ್ ಕರ್ನಾಟಕ ಉಡುಪಿ , ರಾಮಕ್ಷತ್ರಿಯ ಸಂಘ ಉಡುಪಿ , ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟ್ ಉಡುಪಿ ,ಶ್ರೀ ಧರ್ಮಸ್ಥಳ ಆಯುರ್ವೇದ ಉದ್ಯಾವರದ ಜಂಟಿ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಾಗು ಉಚಿತ ಆಯುರ್ವೇದ್ ಔಷಧಿ ವಿತರಣೆ ಕಾರ್ಯಕ್ರಮ ಇಂದು ಉಪ್ಪೂರಿನ ರಾಮಕ್ಷತ್ರಿಯ ಸಭಾ ಭವನದಲ್ಲಿ ನಡೆಯಿತು.

ಧಾರ್ಮಿಕ ದತ್ತಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸಿ ಚಾಲನೆ ನೀಡಿದರು. ಪ್ರಧಾನಿ ಮೋದಿ ಅಭಿಮಾನಿಗಳ ಹಲವು ಸಂಘಟನೆಯಲ್ಲಿ ಮೋದಿ ಬಿಗ್ರೇಡ್ ಸಮಾಜ ಮುಖಿ ಕಾರ್ಯ ನಿರಂತರವಾಗಿ ಹಮ್ಮಿ ಕೊಂಡು ದೇಶದ ಜನರ ಸೇವೆ ಮಾಡುತ್ತಿದೆ ಆಯುರ್ವೇದ ಔಷಧಿ ಕಹಿಯಾದರೂ ದೇಹಕ್ಕೆ ಅರೋಗ್ಯ ನೀಡುತ್ತದೆ ಈ ರೀತಿಯ ಸೇವೆಯಿಂದ ಗ್ರಾಮೀಣ ಪ್ರದೇಶದ ಜನರ ಸಂಘಟನೆ ಬಲಿಷ್ಠವಾಗುತ್ತದೆ ಎಂದರು.ಶಾಸಕರ ಅನುಮತಿ ಮೇರೆಗೆ ಶ್ರೀ ರಾಮ ಆಂಜೆನೇಯ ದೇವಳ ಅಭಿವೃದ್ಧಿಗೆ 8 ಲಕ್ಷ ರೂಪಾಯಿ ಬಿಡುಗಡೆ ಮಾಡಿದರು. ಈ ವೇಳೆ ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟ್ ವತಿಯಿಂದ ಸಚಿವರನ್ನು ಗೌರವಿಸಲಾಯಿತು.

ಉಚಿತ ಅರೋಗ್ಯ ತಪಾಸಣಾ ಶಿಬಿರ ದಲ್ಲಿ ತಜ್ನರಾದ ಡಾ ಅರುಣಾ, ಡಾ ಅರ್ಚನಾ , ಡಾ ಗಣೇಶ , ಮಹಿಳಾ ಹಾಗು ಮಕ್ಕಳ ಪರೀಕ್ಷೆ ನೆಡೆಸಿದರು , ಬಿಪಿ ಪರೀಕ್ಷೆ , ಬಿಂದು ನಾಡಿ ಚಿಕೆತ್ಸೆರಾದ ಹರೀಶ್ ಸಾಮಗ , ನೂರಾರು ಶಿಬಿರಾರ್ಥಿಗಳು ತಪಾಸಣೆ ಹಾಗು ಉಚಿತ ಆಯುರ್ವೇದ ಔಷಧಿ ಪಡೆದುಕೊಂಡರು.

ಶಾಸಕ ರಘುಪತಿ ಭಟ್ , ಜಿಲ್ಲಾ ಸಹಕಾರಿ ಮೀನು ಮಾರಾಟ ಮಂಡಳಿ ಅಧ್ಯಕ್ಷ ಯಶಪಾಲ್ ಸುವರ್ಣ, ಮೋದಿ ಬಿಗ್ರೇಡ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಗಣೇಶ ಪ್ರಸಾದ್ , ವೈದಿಕೀಯ ಅಧೀಕ್ಷಕ ಡಾ ಮಮತಾ ನವೀನ್ , ಉಪಾಧ್ಯಕ್ಷ ಚಿನ್ಮಯಾ ಮೂರ್ತಿ , ರಾಜ್ಯ್ ಕಾರ್ಯದರ್ಶಿ ನೀತಾ ಪ್ರಭು ,ಜಿಲ್ಲಾ ಮಹಿಳಾಧ್ಯಕ್ಷೆ ವೇದಾವತಿ ಹೆಗಡೆ , ಬಿಜೆಪಿ ಮಹಿಳಾ ಜಿಲ್ಲಾ ಅಧ್ಯಕ್ಷೆ ವೀಣಾ ಶೆಟ್ಟಿ,ರಾಮಕ್ಷತ್ರಿಯ ಸಂಘ ದ ಜಿಲ್ಲಾ ಅಧ್ಯಕ್ಷಕೆ ಟಿ ನಾಯಕ, ರಾಮಕ್ಷತ್ರಿಯ ದೇವಸ್ಥಾನದ ಟ್ರಸ್ಟ್ ಮುಖ್ಯಸ್ಥ ಕರುಣಾಕರ ಉಪ್ಪೂರು , ಮೋದಿ ಬಿಗ್ರೇಡ್ ಉಡುಪಿ ಜಿಲ್ಲಾ ಅಧ್ಯಕ್ಷರಾದ ಸುಭಾಶಿತ್ ಕುಮಾರ್ ಸ್ವಾಗತಿಸಿ, ಬಾಲಕೃಷ್ಣ ಪೂಜಾರಿ ನಿರೂಪಿಸಿದರು.

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕುಂಜಾರುಗಿರಿಯ ಗಿರಿಬಳಗ (ರಿ) ಇದರ 32ನೆಯ ವಾರ್ಷಿಕೋತ್ಸವ

ಕುಂಜಾರುಗಿರಿಯ ಗಿರಿಬಳಗ (ರಿ) ನ 32ನೆಯ ವಾರ್ಷಿಕೋತ್ಸವವು ಕುಂಜಾರುಗುರಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಭೆಯಲ್ಲಿ ಭಾಗವಹಿಸಿ, ಇಂದಿನ ಮಕ್ಕಳು ಜೀವನದಲ್ಲಿ ದಾರಿ ತಪ್ಪುತ್ತಿರುವುದು ಬೇಸರದ...

ಮಾಸ್ಟರ್ ಪ್ಲಾನ್ ಗೆ ವೇಗ, ಜನಸ್ನೇಹಿ ಆಡಳಿತಕ್ಕೆ ನಿರ್ಧಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಿರ್ಣಯ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಕೋವಿಡ್ ಕಾರಣದಿಂದ ವಿಳಂಬವಾಗುತ್ತಿರುವ ಮಾಸ್ಟರ್ ಪ್ಲಾನಿಗೆ ವೇಗ ನೀಡಲು, ಸಾರ್ವಜನಿಕರಿಗೆ ತಮ್ಮ ಅರ್ಜಿ ಸ್ಥಿತಿಗತಿ ಮಾಹಿತಿ ನೀಡುವ ನೂತನ ಸಾಫ್ಟವೇರ್ , ಪ್ರಾಧಿಕಾ ರದ ವ್ಯಾಪ್ತಿಯಲ್ಲಿ...

ವಿಪ್ರ ಸಂಘಟನೆಗಳು ಆಶಕ್ತರು, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ~ ವಾಸುದೇವ ಅಡೂರು

ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆಯು ಚಿಟ್ಪಾಡಿ ಶ್ರೀನಿವಾಸ ದೇವಸ್ಥಾನ ದಲ್ಲಿ ಜರುಗಿತು. ಎಸ್ ಎಸ್ ಎಲ್ ಸಿ, ಪಿ ಯು ಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮುಖ್ಯ ಅತಿಥಿ...

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ 

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ (93 ವ.)  ಶನಿವಾರ ದಂದು ನಿಧನರಾಗಿರುತ್ತಾರೆ. ಇವರು ಸ್ವಾತಂ​ತ್ರ್ಯ ಹೋರಾಟಗಾರ ದಿ| ಕುರ್ಕಾಲು ಗಣಪಯ್ಯ ಶೆಟ್ಟರ ಮಗಳು, ಮೂಳೂರು ಬೈಲುಮನೆ ಶತಾಯುಷಿ ದಿ| ಬಾಬು ಶೆಟ್ಟಿಯವರ...
error: Content is protected !!