ಪ್ರೊ.ಎಂ.ಎಲ್. ಸಾಮಗರಿಗೆ ವಿಪ್ರ ವಿಭೂಷಣ ಪ್ರಶಸ್ತಿ ಪ್ರದಾನ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ರಜತವರ್ಷದ ವಿಶೇಷ ಸಾಮಾಜಿಕ ಯೋಜನೆಯಾಗಿ ಈ ವರ್ಷದಿಂದ ಆರಂಭಿಸಿ ವಿಶಿಷ್ಟ ಸಾಧನೆಗೈದ ವಿಪ್ರ ಸಮಾಜದ ಓರ್ವ ಸಾಧಕರಿಗೆ ಪ್ರತಿ ವರ್ಷ ನಗದು ಸಹಿತ ನೀಡಲಾಗುವ ವಿಪ್ರ ವಿಭೂಷಣ ಪ್ರಶಸ್ತಿ ಯನ್ನು ಈ ಬಾರಿ ಶಿಕ್ಷಣ ತಜ್ಞ, ಸಾಂಸ್ಕೃತಿಕ ರಾಯಭಾರಿ, ಖ್ಯಾತ ಯಕ್ಷಗಾನ ಕಲಾವಿದ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ ಎಂ. ಎಲ್. ಸಾಮಗ ಇವರಿಗೆ ಗುಂಡಿಬೈಲಿನ ಬ್ರಾಹ್ಮಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ನೀಡಲಾಯಿತು. 
ಅವರು ಮಾತನಾಡಿ ವಿಪ್ರ ಸಂಘಟನೆಗಳ ಮೂಲಕ ಮುಂದಿನ ದಿನಗಳಲ್ಲಿ ಬ್ರಾಹ್ಮಣರ ಒಳ ಪಂಗಡಗಳು ಒಟ್ಟಾಗಿ ಸಮನ್ವತೆಯಿಂದ, ಐಕಮತ್ಯದಿಂದ ಸಮಾಜದ ಏಳಿಗೆಗೆ ಕೆಲಸ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಪದಾಧಿಕಾರಿಗಳಾದ ವಿಜಯ ರಾಘವ ರಾವ್, ಕೆ.ಎಂ. ಉಡುಪ ನೀಲಾವರ, ಭಾಸ್ಕರ ರಾವ್ ಕಿದಿಯೂರು, ನಾಗರಾಜ ತಂತ್ರಿ ,ಎಂ ಎಸ್ ವಿಷ್ಣು, ವಿಷ್ಣು ಪ್ರಸಾದ್ ಪಾಡಿಗಾರ್, ರಮೇಶ್ ಭಟ್ ಮೂಡಬೆಟ್ಟು, ಕೆ.ಎಸ್. ಪದ್ಮನಾಭ, ಕೆ. ರಘುಪತಿ ರಾವ್, ರಮಾಕಾಂತ್ ಭಟ್, ಪ್ರಸಾದ ಉಪಾಧ್ಯಾಯ, ಸುನೀತಾ ಚೈತನ್ಯ ಮೊದಲಾದವರು ಉಪಸ್ಥಿತರಿದ್ದರು. ರಾಜೇಶ್ ಭಟ್ ಸನ್ಮಾನ ಪತ್ರ ವಾಚಿಸಿದರು ಪರಿಷತ್ತಿನ ಅಧ್ಯಕ್ಷ ಚೈತನ್ಯ ಎಂ.ಜಿ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಎನ್. ವಂದಿಸಿದರು ರವೀಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply