ಕಥೊಲಿಕ್ ಸಭಾ ಅಧ್ಯಕ್ಷರಾಗಿ ಮೇರಿ ಡಿ’ಸೋಜಾ ಆಯ್ಕೆ

ಉಡುಪಿ: ಕ್ರೈಸ್ತ ಸಮುದಾಯದ ಪ್ರಭಾವಿ ಸಂಘಟನೆಯಾದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2021-22 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೇರಿ ಡಿಸೋಜಾ ಉದ್ಯಾವರ ಆಯ್ಕೆಯಾಗಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಆರಂಭದ ಬಳಿಕ ಸಂಘಟನೆಯ ಪ್ರಥಮ ಮಹಿಳಾ ಅಧ್ಯಕ್ಷರು ಎನಿಸಿಕೊಂಡಿದ್ದಾರೆ.

ಉಡುಪಿ ಶೋಕಮಾತಾ ಇಗರ್ಜಿಯಲ್ಲಿನ ಕೆಥೊಲಿಕ್ ಸಭಾ ಕಚೇರಿಯಲ್ಲಿ ಭಾನುವಾರ ನೂತನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಜರುಗಿತು. ಚುನಾವಣಾಧಿಕಾರಿಯಾಗಿ ನಿಕಟ ಪೂರ್ವ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಇತರ ಪದಾಧಿಕಾರಿಗಳ ವಿವರ: ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ (ಆಧ್ಯಾತ್ಮಿಕ ನಿರ್ದೇಶಕರು), ರೋಬರ್ಟ್ ಮಿನೇಜಸ್ ಕಣಜಾರು (ನಿಕಟಪೂರ್ವ ಅಧ್ಯಕ್ಷರು), ಸಂತೋಷ್ ಕರ್ನೆಲಿಯೋ ಸಂತೆಕಟ್ಟೆ (ನಿಯೋಜಿತ ಅಧ್ಯಕ್ಷರು), ರೊನಾಲ್ಡ್ ಡಿ’ಆಲ್ಮೇಡಾ, ಉದ್ಯಾವರ (ಉಪಾಧ್ಯಕ್ಷರು), ಗ್ರೆಗೋರಿ ಪ್ರಭುದ್ದ್ ಕುಮಾರ್ ಡಿಸೋಜಾ (ಪ್ರಧಾನ ಕಾರ್ಯದರ್ಶಿ), ಒಲಿವಿಯಾ ಡಿಮೆಲ್ಲೊ ಕಾರ್ಕಳ (ಸಹಕಾರ್ಯದರ್ಶಿ), ಜೆರಾಲ್ಡ್ ರೊಡ್ರಿಗಸ್ ಶಿರ್ವಾ (ಕೋಶಾಧಿಕಾರಿ), ಮೈಕಲ್ ಪಿಂಟೊ ಕುಂದಾಪುರ (ಸಹ ಕೋಶಾಧಿಕಾರಿ), ಫೆಲಿಕ್ಸ್ ಪಿಂಟೊ ಕೆಮ್ಮಣ್ಣು (ಆಂತರಿಕ ಲೆಕ್ಕಪರಿಶೋಧಕರು). 

 
 
 
 
 
 
 
 
 

Leave a Reply