ಉಡುಪಿಯಲ್ಲಿ ಅಂತರಾಷ್ಟ್ರೀಯ ಪುರುಷರ ದಿನಾಚರಣೆ

ಮಲಬಾರ್‌ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಸಂಸ್ಥೆಯಲ್ಲಿ ವಿಶ್ವ ಪುರುಷರ ದಿನಾಚರಣೆ ಶನಿವಾರ ನಡೆಯತು. ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಸಮಾಜ ಸೇವಕ ವಿಶು. ಶೆಟ್ಟಿ ಅಂಬಲಪಾಡಿ, ಯುವ ಪ್ರತಿಭೆ ಸುಶಾಂತ್‌ ಕೆರೆಮಠ ಅವರನ್ನು ಅಭಿನಂದಿಸ ಲಾಯಿತು.
ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಆಶಯ ಭಾಷಣ ಮಾಡಿ, ಮಾಯಾ ಜಿಂಕೆಯ ವಿಷ್ಯ ಗೊತ್ತಿದ್ದೂ ಮಡದಿ ಪ್ರೀತಿಯಿಂದ ಬೇಟೆಗೆ ಶ್ರೀರಾಮ ಹೋದರೆ, ದ್ರೌಪದಿಯಿಂದಲೇ ಮಹಾಭಾರತ ನಡೆದಿದೆ. ಪ್ರತಿ ಮನೆಯಲ್ಲೂ ಪುರುಷನ ಸಹಕಾರವಿದ್ದರಷ್ಟೇ ಶಾಂತಿ, ನೆಮ್ಮದಿ ಇರಲು ಸಾಧ್ಯ. “ಮಹಿಳೆಯರ ಸಾಧನೆ ಹಿಂದೆ ಪುರುಷರ ತ್ಯಾಗವಿದೆ, ಪುರುಷನಿಲ್ಲದ ಜೀವನ ಬರಡು ಎಂದು ಹೇಳಿದರು.
ಕಾಪು ಪೊಲಿಪು ಸರಕಾರಿ ಪ.ಪೂ.ಕಾಲೇಜಿನಹಿರಿಯ ಉಪನ್ಯಾಸಕ ನಾಗರಾಜ ಜಿ.ಎಸ್‌., ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್‌ ಎಚ್‌.ಪಿ, ಸೌತ್‌ ಕೆನರಾ ಫೊಟೋಗ್ರಾಫಸ್ಟ್‌ ಅಸೋಸಿ ಯೇಶನ್‌ ಉಡುಪಿ ವಲಯಾಧ್ಯಕ್ಷ ಜನಾರ್ದನ ಕೊಡವೂರು, ಲಯನ್ಸ ಜಿಲ್ಲೆ 317 ಮಾಜಿ ಗವರ್ನರ್‌ ವಿ.ಜಿ. ಶೆಟ್ಟಿ,  ಮಲಬಾರ್‌ ಗೋಲ್ಡ್‌ ಅಂಡ್‌ ಡೈಮ್‌ಡ್ಡ್‌ ಸಂಸ್ಥೆಯ ಶಾಖಾ ಉಪ ವ್ಯವಸ್ಥಾಪಕ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್  ಉಪಸ್ಥಿತರಿದ್ದರು.
ವಾಸಂತಿ ಅಂಬಲಪಾಡಿ ಕವನ ವಾಚಿಸಿದರು. ಜ್ಯೋತಿ ದೇವಾಡಿಗ ಪ್ರಾರ್ಥಿಸಿದರು. ಕಾವ್ಯ ಪೂಜಾರಿ ನಿರೂಪಿಸಿದರು. ಪೂರ್ಣಿಮಾ ಜನಾರ್ದನ್, ದಯಾಸಿನಿ ಸನ್ಮಾನಿತರ ಪರಿಚಯಿಸಿದರು. ತಾರಾ ಆಚಾರ್ಯ ದನ್ಯವಾದವಿತ್ತರು.  ಸಂಘಟಕಿ ವಿದ್ಯಾ ಸರಸ್ವತಿ ಸ್ವಾಗತಿಸಿದರು.
ಕಾರ್ಯಕ್ರಮಕ್ಕೆ ಬಂದ ಎಲ್ಲಾ ಪುರುಷರಿಗೆ ಗುಲಾಬಿ ನೀಡುವುದರ ಮೂಲಕ ವಿಶಿಷ್ಟವಾಗಿ ಆಚರಿಸಿತು ಉಡುಪಿಯ ಸಮಾನ ಮನಸ್ಕರ ಗೆಳತಿಯರ ತಂಡ.  

Leave a Reply