ರೋಟರಿ ಕ್ಲಬ್ ಮಣಿಪಾಲ ಜೈಪುರ ಕೃತಕ ಕಾಲು ಜೋಡಣಾ ಶಿಬಿರ

ಮಣಿಪಾಲ: – ರೋಟರಿ ಕ್ಲಬ್ ಮಣಿಪಾಲ ಹಾಗೂ ಭಗವಾನ್ ಮಹಾವೀರ್ ವಿಕಲಾಂಗ ಸಹಾಯಕ ಸಮಿತಿ ಬೆಂಗಳೂರು ಮತ್ತು ಪೇಜಾವರ ಮಠ ಉಡುಪಿ ಇವರುಗಳ ಸಹಯೋಗದಲ್ಲಿ ಉಚಿತ ಜೈಪುರ್ ಕೃತಕ ಕಾಲು ಜೋಡನಾ ಶಿಬಿರ ರೋಟರಿ ಕ್ಲಬ್ ಮಣಿಪಾಲದ ಆವರಣದಲ್ಲಿ ಎ.15 ರಂದು ಉದ್ಘಾಟನೆ ನಡೆಯಿತು.ಸುಮಾರು 20 ಲಕ್ಷ ವೆಚ್ಚದ
ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾII ಟಿ.ಎಂ.ಎ ಪೈ ಪ್ರತಿಷ್ಟಾನದ ಕಾಯ೯ದಶಿ೯ ಅಶೋಕ್ ಪೈ ಯವರು ರೋಟರಿ ಕ್ಲಬ್ ಮಣಿಪಾಲದ ಸಮಾಜ ಸೇವಾ ಚಟುವಟಿಕೆಗಳನ್ನು ಪ್ರಶಂಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ನಾಗಭೂಷಣ ಉಡುಪಿ ಆರೋಗ್ಯ ಇಲಾಖೆ ಮಾಡುವ ಕೆಲಸ ತಾವು ನಡೆಸುತ್ತಿರುವುದು ಅಭಿನಂದನೀಯ ಎಂದರು.

ಬಿ ಎಂ ವಿ ಎಸ್.ಎಸ್ ಮುಖ್ಯಸ್ತರಾದ ಅನಿಲ್ ಸುರಾನ, ಡಾII ಗಿರಿಜಾ ರಾವ್ , ನಿಯೋಜಿತ ಜಿಲ್ಲಾ ಗವನ೯ರ್ ಡಾ| ಗೌರಿ, ಡಾ|| ಸುರೇಶ್ ಶೆಣಿೈ, ಅಮಿತ್ ಅರವಿಂದ್, ರಾಜ ವಮ೯ ಅರಿಗ ಉಪಸ್ಥಿತರಿದ್ದರು.ಅಧ್ಯಕ್ಷರಾದ ಡಾII ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು. ರೇಣು ಜಯರಾಂ ನಿರೂಪಿಸಿದರು.ಶಿಬಿರಕ್ಕೆ 500 ಜನ ನೋಂದಾವಣೆ ಮಾಡಿದ್ದು, 100ಕ್ಕೂ ಹೆಚ್ಚು ಫಲಾನುಭವಿಗಳು ಮೊದಲ ದಿನ ಭಾಗವಹಿಸಿದ್ದರು. ಈ ಶಿಬಿರ 5 ದಿನಗಳ ಕಾಲ ನಡೆಯಲಿದೆ.

 
 
 
 
 
 
 
 
 
 
 

Leave a Reply