ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯಿಂದ ಲಾಕ್ಡೌನ್ ನಲ್ಲಿ ವಿವಿಧೆಡೆ ಕಿಟ್ ವಿತರಣೆ

ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಸಂಸ್ಥೆಯ ವತಿಯಿಂದ ಬ್ರಹ್ಮವಾರ,ಮಣಿಪಾಲ್ ರಾಜೀವ ನಗರ,ಉದ್ಯಾವರ, ಕಾಪು,ಪಣಿಯೂರು ಪರಿಸರದ ಅರ್ಹ ಫಲಾನುಭವಿ 126 ಕುಟುಂಬಕ್ಕೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಲಾಕ್ಡೌನ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಿಸಲಾಯಿತು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯರ ಮನವಿ ಮೇರೆಗೆ ಚೇತನ್ ಪೂಜಾರಿಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಹಾರ ಕಿಟ್ ಹಸ್ತಾಂತರಿಸಲಾಯಿತು.ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. 

ಸಮಾಜ ಸೇವಕ ಸುಧೀರ್ ನಾಯಕ್ ಮನವಿ ಮೇರೆಗೆ ಮಣಿಪಾಲ ರಾಜೀವ ನಗರದ ಆಸುಪಾಸಿನ ಕೋವಿಡ್ ಸಂಕಷ್ಟದಲ್ಲಿರುವ ಬಡವರ ಕುಟುಂಬಕ್ಕೆ ಫುಡ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಕೋವಿಡ್ ಪಾಸಿಟಿವ್ ಆಗಿರುವ ಕುಟುಂಬಗಳಿಗೆ ಮನೆಗೆ ಹೋಗಿ ಫುಡ್ ಕಿಟ್ ವಿತರಿಸಲಾಯಿತು.ಪ್ರಭಾಕರ ನಾಯಕ್, ವಿಶ್ವಮೂರ್ತಿ ಆಚಾರ್ಯ,ದೀಪು, ಪಂಚಾಯತ್ ಸದಸ್ಯ ಫ್ಲೋಸಿ ಫೇರ್ನಾಂಡೀಸ್ ಮತ್ತು ಸುಧೀರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಬ್ರಹ್ಮವಾರದ ಕೊಲಂಬೆಯಲ್ಲಿ ಮಂಗಳಮುಖಿ ಸಮುದಾಯದ ನಗ್ಮಾ ಕಾಜಲ್ ಮನವಿ ಮೇರೆಗೆ ,ಪಣಿಯೂರು ಗ್ರಾಮದಲ್ಲಿ ಸುಷ್ಮಾರ ಮನವಿ ಮೇರೆಗೆ, ಉದ್ಯಾವರದಲ್ಲಿ ಪುರಂದರ ತಿಂಗಲಾಯ ಮನವಿ ಮೇರೆಗೆ ರೇಷನ್ ಕಿಟ್ ಹಸ್ತಾಂತರಿಸಲಾಯಿತು.ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ,ಇರ್ಷಾದ್,ನಿತಿನ್ ಶೇಟ್,ತಸ್ಲೀಮ್,ಫಯಾಜ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply