ಲಯನ್ಸ್ ಕ್ಲಬ್ ಉಡುಪಿ ಸೌತ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಸೌತ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಎನ್ ಎಮ್ ಹೆಗಡೆಯ ಅಧಿಕೃತ ಭೇಟಿ ಕಾರ್ಯಕ್ರಮ ಉಡುಪಿ ಟೌನ್ ಹಾಲ್ ನಲ್ಲಿ ಜರುಗಿತು.

ಕ್ಲಬ್ ನ ಸೇವಾ ಯೋಜನೆಯಡಿಯಲ್ಲಿ ಪಡು ಅಲೆವೂರು ಸರಕಾರಿ ಪ್ರಾಥಮಿಕ ಶಾಲೆಗೆ ಧ್ವನಿ ವರ್ಧಕ ಕೊಡುಗೆ,ಕುಕ್ಕಿಕಟ್ಟೆ ಹಿ ಪ್ರಾ ಶಾಲೆ ಹಾಗೂ ಅಜ್ಜರಕಾಡು ಪ್ರೌಢಶಾಲೆಗೆ ಸ್ಯಾನಿಟೈಸರ್ ಮಿಷಿನ್,ಅನಾರೋಗ್ಯ ಮಹಿಳೆಗೆ ಆರ್ಥಿಕ ನೆರವು,ಹಾಗೂ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದಿರುವ ಡಿಡಿಪಿಐ ಎನ್ ಎಚ್ ನಾಗೂರಿಗೆ ಸಮ್ಮಾನಿಸಲಾಯಿತು.

ಪ್ರಥಮ ಉಪ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ,ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ ಜಿ ಆಚಾರ್ಯ,ಪ್ರಾಂತ್ಯಾಧ್ಯಕ್ಷ ಗಣೇಶ ಸುವರ್ಣ, ವಲಯಾಧ್ಯಕ್ಷ ಹರೀಶ್ ಪೂಜಾರಿ,ಪ್ರಥಮ ಮಹಿಳೆ ಸಂಧ್ಯಾ ಹೆಗಡೆ, ಲಿಯೋ ಅಧ್ಯಕ್ಷೆ ಸಂಜನಾ ಬಾಯರಿ,ಲಿಯೋ ಖಜಾಂಜಿ ದೀಷ್ಣಾ ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಕ್ಲಬ್ ಅಧ್ಯಕ್ಷೆ ವೀಣಾ ಬಾಯರಿ ಸ್ವಾಗತಿಸಿದರು. ಕಾರ್ಯದರ್ಶಿ ಶಾಲಿನಿ ಬಂಗೇರ ವರದಿ ವಾಚಿಸಿ ಖಜಾಂಜಿ ವಿಜಯಾ ಬಾಯರಿ ವಂದಿಸಿದರು. ಪ್ರೋ.ವೇಣುಗೋಪಾಲ ಮುಳ್ಳೇರಿಯಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply