ಲಯನ್ಸ್ ಕ್ಲಬ್ ಬ್ರಹ್ಮಗಿರಿಯಿಂದ ಶಿಕ್ಷಕರ ದಿನಾಚರಣೆ

ಇದೆ ನವೆಂಬರ್ ನಲ್ಲಿ ನಿವೃತ್ತರಾಗುತ್ತಿರುವ, 26 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಪ್ರಸ್ತುತ ಸರಕಾರಿ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆ, ಒಳಕಾಡಿನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಜಾನಕಿ ಕೆ ಇವರನ್ನು ಬಾಲ ಭವನದಲ್ಲಿ ಶಿಕ್ಷಕ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಬ್ರಹ್ಮಗಿರಿಯವರು ಸನ್ಮಾನಿಸಿದರು.

 ಸನ್ಮಾನ ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಜಾನಕಿ ಕೆ ಪ್ರತಿಯೊಬ್ಬ ಶಿಕ್ಷಕಿ ವಿದ್ಯಾರ್ಥಿಗಳಲ್ಲಿ ದೇವರನ್ನು ಕಂಡು, ಕೊಡುವ ವಿದ್ಯಾಭ್ಯಾಸ ಬಹಳ ಮಹತ್ವದ ಪಾತ್ರ ವಹಿಸಿದಂತಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನನ್ನು ಜೀವನದಲ್ಲಿ ಉತ್ತಮ ಮಾರ್ಗ ತೋರಿಸಿ, ಉತ್ತಮ ಪ್ರಜೆ ಮಾಡುವಲ್ಲಿ ಶಿಕ್ಷಕರ ಮಾರ್ಗದರ್ಶನ ಪಡೆದು ಅವರನ್ನು ಶಿಕ್ಷಕರ ದಿನಾಚರಣೆಯಂದು ಸ್ಮರಿಸಿ ಸನ್ಮಾನಿಸುವುದೇ ಅವರು ಸಲ್ಲಿಸುವ ಗೌರವ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಶಿಕ್ಷಕ ದಿನಾಚರಣೆ ಅಂಗವಾಗಿ ಆಯೋಜಿಸಿದ ಪಿಯುಸಿ ವಿದ್ಯಾರ್ಥಿಗಳ ಕಾರ್ಯಗಾರವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೀನಿಯರ್ ಮ್ಯಾನೇಜರ್ ಗೌರವ ಸಿಂಗ್ ಮಕ್ಕಳನ್ನು ಉದ್ದೇಶಿಸಿ ಬ್ಯಾಂಕಿನಿಂದ ಮೇಲಿನ ವಿದ್ಯಾಭ್ಯಾಸಕ್ಕೆ ಸಿಗುವ ಸವಲತ್ತುಗಳನ್ನು ವಿವರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ ಉಮೇಶ್ ನಾಯಕ್ ಸ್ವಾಗತಿಸಿ, ಕಾರ್ಯದರ್ಶಿ ಲಯನ್ ಗೀತಾ ವಿ ರಾವ್ ಧನ್ಯವಾದ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮವನ್ನು ಲಯನ್ ಇಂದಿರಾ ಹೆಗಡೆ ನಿರೂಪಿಸಿದರು.

 
 
 
 
 
 
 
 
 
 
 

Leave a Reply