Janardhan Kodavoor/ Team KaravaliXpress
24.6 C
Udupi
Friday, December 2, 2022
Sathyanatha Stores Brahmavara

ಲಯನ್ಸ್ ಕ್ಲಬ್ ಬ್ರಹ್ಮಗಿರಿಗೆ ವಲಯ ಅಧ್ಯಕ್ಷರ ಅಧಿಕೃತ ಭೇಟಿ

ಇತ್ತೀಚೆಗೆ ರೀಜನ್ 6, ವಲಯ ಒಂದರ ವಲಯ ಅಧ್ಯಕ್ಷರಾದ ಲಯನ್ ದಯಾನಂದ ಕೊಡವರು ಲಯನ್ಸ್ ಕ್ಲಬ ಬ್ರಹ್ಮಗಿರಿಗೆ ಅಧಿಕೃತ ಭೇಟಿ ನೀಡಿದರು. ಕಾರ್ಯಕ್ರಮ ಟೌನ್ ಹಾಲ್ ಅಜ್ಜರಕಾಡಿನಲ್ಲಿ ಆಯೋಜಿಸಲಾಗಿತ್ತು.

” ನಮ್ಮ ವಲಯದ ಎಲ್ಲಾ ಆರು ಕ್ಲಬ್ಬಗಳು ಬಹಳ ಉತ್ತಮ ಸೇವೆ ಮಾಡುತ್ತಿದ್ದಾರೆ, ಇನ್ನು ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಿ” ಎಂದು ವಲಯದ ಅಧ್ಯಕ್ಷರು ಕರೆ ನೀಡಿದರು. ಲಯನ್ಸ್ ಕ್ಲಬ್ ಅಂಬಲಪಾಡಿ ಪ್ರೈಡ್ ನ ಅಧ್ಯಕ್ಷರಾದ ಲಯನ್ ಪ್ರಶಾಂತ್ ಭಂಡಾರಿ, ಲಯನ್ಸ್ ಕ್ಲಬ್ ಮಣಿಪಾಲದ ಮತ್ತು ಕ್ಯಾಂಪಸ್ ಕಾರ್ಯದರ್ಶಿ ಲಯನ್ ಕೇಶವರಾಯ್ ಪೈ,

ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ಅಧ್ಯಕ್ಷರಾದ ಲಯನ್ ಸುಮಲಿನಿ ದಯಾನಂದ, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷರಾದ ಜಯಪ್ರಕಾಶ್ ಬಂಡಾರಿ, ಲಯನ್ ವಿಜೇತ ರೈ ಖಜಾಂಚಿ ಲೈನ್ಸ್ ಕ್ಲಬ್ ಬ್ರಹ್ಮಗಿರಿ,ವೇದಿಕೆ ಮೇಲೆ ಉಪಸ್ಥಿತರಿದ್ದರು.

ಲಯನ್ ವಾದಿರಾಜರಾವ್ ಅವರಿಂದ ಕೊಡುಗೆ ಮಾಡಿದ ಸುಮಾರು ರೂಪಾಯಿ 20,000 ಬೆಲೆಯ ಹಿಯರಿಂಗ್ ಮಷೀನ್, ವಲಯಾಧ್ಯಕ್ಷ ರು, ಬ್ರಹ್ಮಗಿರಿ ಅಧ್ಯಕ್ಷರ ಮುಖಾಂತರ ರವಿ ಕುಮಾರ್ ಅವರಿಗೆ ವಿತರಿಸಲಾಯಿತು.

 ಅಧ್ಯಕ್ಷರಾದ ಲಯನ್ ಉಮೇಶ್ ನಾಯಕ್ ಸ್ವಾಗತಿಸಿ ಕೊನೆಯಲ್ಲಿ ಕಾರ್ಯದರ್ಶಿ ಲಯನ್ ಗೀತಾ ವಿ ರಾವ್ ಧನ್ಯವಾದ ಸಮರ್ಪಿಸಿದರು. ಲಯನ್ ಸತೀಶ್ ಶೆಟ್ಟಿ ಹಾಗೂ ಲಯನ್ ಡಾಕ್ಟರ್ ಗಣೇಶ್ ಪೈ ಶುಭಾಶಂಸನೆಗೈದರು. ಕಾರ್ಯಕ್ರಮವನ್ನು ಇಂದಿರಾ ಹೆಗ್ಡೆ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!