ಮೂಡುಬೆಳ್ಳೆ ಲಯನ್ಸ್ ಕ್ಲಬ್ ಇದರ ರಜತ ವರ್ಷದ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರ

ಮೂಡುಬೆಳ್ಳೆ ಲಯನ್ಸ್ ಕ್ಲಬ್ ಇದರ ರಜತ ವರ್ಷದ ಪ್ರಯುಕ್ತ ಪ್ರಸಾದ್ ನೇತ್ರಾಲಯದ ವತಿಯಿ೦ದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಲಯನ್ಸ್ ಇ೦ಟರ್ ನ್ಯಾಷನಲ್, ಲಯನ್ಸ್ ಕ್ಲಬ್-ಲಿಯೋ ಕ್ಲಬ್ ಮೂಡುಬೆಳ್ಳೆ, ಇದರ ರಜತ ವರ್ಷದ ಸಾಮಾಜಿಕ ಚಟುವಟಿಕೆಗಳ ಅ೦ಗವಾಗಿ ಉಡುಪಿಯ ಪ್ರಸಾದ್ ನೇತ್ರಾಲಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆ- ಅ೦ಧತ್ವ ನಿವಾರಣಾ ವಿಭಾಗ ಜ೦ಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತç ಚಿಕಿತ್ಸೆ ಶಿಬಿರವು ಲಯನ್ಸ್ ಸೇವಾ ಭವನ, ಮೂಡುಬೆಳ್ಳೆಯಲ್ಲಿ ದಿನಾ೦ಕ 18.09.2022ರ೦ದು ನಡೆಯಿತು.

ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ದೀಪ ಬೆಳಗಿಸುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕಮಡೋರ್ ಕ್ಯಾಸ್ಟೆಲಿನೊ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೂಡುಬೆಳ್ಳೆ ಚರ್ಚ್ನ ಧರ್ಮಗುರುಗಳಾದ ವ೦ದನೀಯ ಫಾದರ್ ಜಾರ್ಜ್ ಡಿಸೋಜಾರವರು ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಶ್ರೀ ದೇವದಾಸ್ ಹೆಬ್ಬಾರ್, ಕೋಶಾಧಿಕಾರಿ ಇಲಿಯಾಸ್ ಲೊಬೊ, ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಶ್ರೀ ಅನಿಲ್ ಡಿಸೋe಼Á, ಬೆಳ್ಳೆ ಚರ್ಚ್ನ ಆರೋಗ್ಯ ಸಮಿತಿಯ ಅಧ್ಯಕ್ಷೆ ಅನ್ಸಿಲಾ ಡಿಸೊe಼Á, ಪ್ರಸಾದ್ ನೇತ್ರಾಲಯದ ನೇತ್ರತಜ್ಞ ಡಾ. ಸಚಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ 135 ಶಿಬಿರಾರ್ಥಿಗಳು ಕಣ್ಣಿನ ತಪಾಸಣೆಗೊಳಗಾದರು, 21 ಮ೦ದಿಗೆ ಶಸ್ತçಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. 59 ಮ೦ದಿಗೆ ರಿಯಾಯಿತಿ ದರದ ಕನ್ನಡಕ ವಿತರಣೆಗೆ ಆಯ್ಕೆಯಾದರು.

Leave a Reply