ಖೈದಿಗಳ ಜೊತೆ ಲಯನ್ಸ್ ಮಣಿಪಾಲ ವ್ಯಾಲಿ ವತಿಯಿಂದ ರಕ್ಷಾ ಬಂಧನ ಆಚರಣೆ

ಮಣಿಪಾಲ: ಉಡುಪಿಯ ಹಿರಿಯಡ್ಕ ಕಾರಾಗೃಹದಲ್ಲಿ ಲಯನ್ಸ್ ಕ್ಲಬ್‌ ಮಣಿಪಾಲ ವ್ಯಾಲಿ ವತಿಯಿಂದ ರಕ್ಷಾ ಬಂಧನ ಆಚರಿಸಲಾಯಿತು. ಸುಮಾರು 160 ಜನ ಖೈದಿಗಳು ಮತ್ತು ಜೈಲು ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಖೈದಿಗಳಿಗೆ ರಾಖಿ ಕಟ್ಟಿ, ಆರತಿ ಎತ್ತಿ, ತಿಲಕವಿಟ್ಟು ಸಿಹಿ ಹಂಚಲಾಯಿತು. ಈ ಸಂದರ್ಭ ಅಧ್ಯಕ್ಷೆ ಸಾಧನಾ ಕಿಣಿ, ಕಾರ್ಯದರ್ಶಿ ರಾಜು ಪಹುಜಾ, ವಿನುತಾ ಕಿರಣ್‌, ರಂಜಿತಾ ಶೇಟ್‌ (ಪ್ರಥಮ ಉಪಾಧ್ಯಕ್ಷೆ ), ಡಾ.ಪಲ್ಲವಿ ( ದ್ವಿತೀಯ ಉಪಾಧ್ಯಕ್ಷೆ) , ಭೂಮಿಕಾ ಪಹುಜಾ, ಪ್ರಮೀಳಾ, ಮುಕ್ತಾ, ಆದಿತ್ಯ ಶೇಟ್, ಲಿಯೋ ಆದಿತ್ಯ ಪೈ, ನಮನ್ ಹೆಚ್, ಅಕ್ಷತ್ ಪೈ ಮೊದಲಾದವರು ಉಪಸ್ಥಿತರಿದ್ದರು.

Leave a Reply