ಲಯನ್ಸ್ ಹಾಗೂ ಲಿಯೋ ಕ್ಲಬ್ ಉಡುಪಿ ಸೌತ್ ವತಿಯಿಂದ ಝೋನ್ ಸೋಶಿಯಲ್ ಸಮಾರಂಭ

ಲಯನ್ಸ್ ಹಾಗೂ ಲಿಯೋ ಕ್ಲಬ್ ಉಡುಪಿ ಸೌತ್ ವತಿಯಿಂದ ಝೋನ್ ಸೋಶಿಯಲ್ ಸಮಾರಂಭವು ಲಯನ್ಸ್ ವಲಯಾಧ್ಯಕ್ಷ ಹರೀಶ್ ಪೂಜಾರಿಯವರ ಉಪಸ್ಥಿತಿಯಲ್ಲಿ ಜರುಗಿತು.

ಕಿಡ್ನಿ ವೈಪಲ್ಯದ ಮಹಿಳೆಗೆ ಡಯಾಲಿಸಿಸ್ ಗಾಗಿ ಆರ್ಥಿಕ ಧನ ಸಹಾಯ’ಪೀಸ್ ಪೋಸ್ಟ್ ರ್’ ಸ್ಪರ್ಧೆಯಲ್ಲಿ ಲಯನ್ಸ್ ಮಲ್ಟಿಪಲ್ ನಲ್ಲಿ ಬಹುಮಾನ ಪಡೆದ ಪ್ರತಿಷ್ಟಾ ಶೇಟ್ ಹಾಗೂ ಸೋನಿ ಟಿ ವಿ ರವರ ‘ಕೌನ್ ಬನೇಗ ಕರೋಡ್ ಪತಿ’ ಸ್ಪರ್ಧೆಯಲ್ಲಿ 50 ಲಕ್ಷ ಬಹುಮಾನ ಪಡೆದ ಉಡುಪಿಯ ಮಾ| ಅನಮಯ ರವರನ್ನು ಕ್ಲಬ್ ವತಿಯಿಂದ  ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಲಯನ್ಸ್ ಪ್ರಾಂತೀಯಧ್ಯಕ್ಷ ಗಣೇಶ್ ಸುವರ್ಣ ಜಿಲ್ಲಾ ಸಂಪುಟ ಪಧಾದಿಕಾರಿಗಳಾದ ರವಿರಾಜ್ ನಾಯಕ್ ದಿನೇಶ್ ಬಂಗೇರ ಗೋಪಾಲ ಬಾಯರಿ ವಿಜಯ ಬಾಯರಿ ವೈಜಯಂತಿ ಕಾರಂತ್ ವಲಯದ ವಿವಿಧ ಕ್ಲಬ್ ನ ಅಧ್ಯಕ್ಷರು , ಲೀಯೋ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕ್ಲಬ್ ನ ಅಧ್ಯಕ್ಷೆ ವೀಣಾ ಬಾಯರಿ ಸ್ವಾಗತಿಸಿದರು.ಕಾರ್ಯದರ್ಶಿ ಶಾಲಿನಿ ಬಂಗೇರ ವಂದಿಸಿದರು. ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ ಮುಳ್ಳೇರಿಯಾ ಕಾರ್ಯಕ್ರಮ ನಿರೂಪಿಸಿದರು

 
 
 
 
 
 
 
 
 
 
 

Leave a Reply