ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಅನೇಕ ಕುಟುಂಬಗಳು ತತ್ತರಗೊಂಡಿದ್ದವು. ಅಂತಹ ಹಾನಿಗಿಡಾದ ಸುಮಾರು 500 ಅರ್ಹ ನೆರೆ ಸಂತೃಸ್ತ ಕುಟಂಬಗಳಿಗೆ ಲಯನ್ಸ್ ಜಿಲ್ಲೆ 317 C ಯ ನೇತೃತ್ವದಲ್ಲಿ ಪರಿಹಾರ ನೀಡಲಾಯಿತು.ಇಂದು ಲಯನ್ಸ್ ನೇತೃತ್ವದಲ್ಲಿ ಪರಿಹಾರವಾಗಿ ಆಹಾರಧಾನ್ಯ ಹಾಗೂ ದಿನೋಪಯೋಗಿ ವಸ್ತುಗಳನ್ನೊಳಗೊಂಡ ಕಿಟ್ ಗಳನ್ನು ವಿತರಿಸ ಲಾಯಿತು. ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ನೀಲಕಂಠ ಎಮ್ ಹೆಗಡೆ ಹಾಗೂ ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ವಿಶ್ವನಾಥ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಟಿ.ಜಿ. ಆಚಾರ್ಯ, ಪ್ರಾಂತ್ಯಾಧ್ಯಕ್ಷರಾದ ಲಯನ್ ರಂಜನ್ ಕೆ, ಲಯನ್ ಗಣೇಶ ಸುವರ್ಣ, ಜಿಲ್ಲಾ ಸಂಯೋಜಕರಾದ ಲಯನ್ ಸತೀಶ್ ಶೆಟ್ಟಿ, ಹಾಗೂ ಜಿಲ್ಲಾ ಸಂಪುಟದ ಪದಾಧಿಕಾರಿಗಳು , ಜಿಲ್ಲಾ ಪ್ರಾಂತ್ಯ ಪದಾಧಿಕಾರಿಗಳು ವಲಯಾಧ್ಯಕ್ಷರು, ಕ್ಲಬ್ ಅಧ್ಯಕ್ಷರುಗಳು.
ಪದಾಧಿಕಾರಿಗಳು ಹಾಗೂ ಸದಸ್ಯರುಗಳ ಉಪಸ್ಥಿತಿ ಯಲ್ಲಿ ನೂರಾರು ಫಲಾನುಭವಿಗಳಿಗೆ ಆಹಾರಧಾನ್ಯಗಳ ಹಾಗೂ ದಿನೋಪಯೋಗಿ ವಸ್ತುಗಳ ಕಿಟ್ ಗಳನ್ನು ಲಯನ್ಸ್ ಭವನ, ಬ್ರಹ್ಮಗಿರಿ ಇಲ್ಲಿ ನೆರೆ ಸಂತ್ರಸ್ತ ಕುಟುಂಬಗಳಿಗೆ ನೀಡಲಾಯಿತು.
ನೆರೆ ಸಂತ್ರಸ್ತ ಕುಟಂಬಗಳಿಗೆ ಲಯನ್ಸ್ 317 C ನೇತೃತ್ವದಲ್ಲಿ ಆಹಾರಧಾನ್ಯ ವಸ್ತುಗಳ ವಿತರಣೆ

- Advertisement -