ಲಯನ್ಸ್ ಕ್ಲಬ್ ಬ್ರಹ್ಮಗಿರಿಯಿಂದ ಮದರ್ ತೆರೇಸಾ ಅವರ 112ನೇ ಜನ್ಮ ದಿನಾಚರಣೆ

ಉಡುಪಿಯ ಪುರಭವನದಲ್ಲಿ ಮದರ್ ತೆರೇಸಾ ಅವರ 112ನೇ ಜನ್ಮ ದಿನಾಚರಣೆಯನ್ನು ಲಯನ್ಸ್ ಕ್ಲಬ್ ಬ್ರಹ್ಮಗಿರಿ ಮತ್ತು ಲಯನ್ಸ್ ಕ್ಲಬ್ ಮಣಿಪಾಲ್ ವ್ಯಾಲಿ ಇವರ ಸಹಯೋಗದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪ್ರಸಾದ್ ನೇತ್ರಾಲಯದ ಡಾ। ಮೈತ್ರಿ ತುಂಗಾ, ಹಾಗೂ 317 ಸಿಯ ಪಿಡಿಜಿ ಲಯನ್ ಸುರೇಶ್ ಪ್ರಭು ಅವರು ಉಪಸ್ಥಿತರಿದ್ದರು. 

 
ಡಾ. ಮೈತ್ರಿ ತುಂಗಾ ಅವರು ಕಣ್ಣಿನ ಆರೈಕೆ,  ಜಾಗರೂಕತೆ ಹಾಗೂ ಕಣ್ಣು ದಾನದ ಬಗ್ಗೆ ಸಭೆಗೆ ವಿವರಿಸಿ ದರು. ಪಿಡಿಜಿ ಲಯನ್  ಸುರೇಶ್ ಪ್ರಭು ಅವರು ಇತ್ತೀಚಿಗೆ ಉಂಟಾದ ಅಪಘಾತದಲ್ಲಿ ಕಾಲಿಗೆ ಸರ್ಜರಿಯಾದ ಕುಕ್ಕಿಕಟ್ಟೆಯ ಅಭಿಷೇಕ್ ಶೆಟ್ ಅವರ ತಾಯಿಗೆ ಸಹಾಯಧನವನ್ನು ಕ್ಲಬ್ಬಿನ ಪರವಾಗಿ ಹಸ್ತಾಂತರಿಸಿದರು. 
 
ವೇದಿಕೆಯ ಮೇಲೆ ಲಯನ್ಸ್ಕ್ಲ ಬ್ ಮಣಿಪಾಲ್ ವ್ಯಾಲಿ ಅಧ್ಯಕ್ಷೆ ಲಯನ್ ಸಾಧನಾ ಕಿಣಿ, ಕಾರ್ಯದರ್ಶಿ ಲಯನ್ ರಾಜು  ಪಹುಜಾ , ಪ್ರಾಂತ್ಯ 6ರ  ಕಾರ್ಯದರ್ಶಿಯಾದ ಲಯನ್ ಗಿರೀಶ್ ರಾವ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಕಾರ್ಯದರ್ಶಿ ಲಯನ್ ಗೀತಾ ವಿ ರಾವ್ ಸ್ವಾಗತಿಸಿ, ಧನ್ಯವಾದವಿತ್ತರು. 
 
ಪ್ರಾರಂಭದಲ್ಲಿ ಬ್ಲಾಕ್ ಬೆಲ್ಟ್ ನಾಲ್ಕನೇ ಡೆನ್ ರೆಫ್ರಿ ಶ್ರೀ ರಾಜಶೇಖರ್ ಮತ್ತು ಶಿರಿಬೀಡು ಯೂನಿಟ್ ನ ಬ್ಲಾಕ್ ಬೆಲ್ಟ್ ರೆಫ್ರಿ ಶ್ರೀ ವರುಣ್ ಮತ್ತು ಅವರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ 8 ವರ್ಷ ಪ್ರಾಯದ ಬಾಲಕ ಉಗಮ ಆರ್ ಪಹುಜಾ ಅವರು ತಮ್ಮ ಕರಾಟೆ ಪ್ರದರ್ಶನ ನಡೆಸಿದರು.  
 
 
 
 
 
 
 
 
 
 
 

Leave a Reply