-ಲಿಯೋ ಕ್ಲಬ್ ಪರ್ಕಳಕ್ಕೆ ಲಿಯೋ ಜಿಲ್ಲಾಧ್ಯಕ್ಷ ಭೇಟಿ

ಉಡುಪಿ: ಲಿಯೋ ಕ್ಲಬ್ ಪರ್ಕಳಕ್ಕೆ ಜಿಲ್ಲೆಯ ಲಿಯೋ ಅಧ್ಯಕ್ಷರ ಭೇಟಿ ಕಾರ್ಯಕ್ರಮವನ್ನು ಪುರಭವನ, ಉಡುಪಿ ಮಿನಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ಲಿಯೋ ಅಧ್ಯಕ್ಷ ಐಲಿಸ್ ಮಿರಾಂಡ ಭೇಟಿ ನೀಡಿ, ಜಿಲ್ಲೆಯ ಪ್ರಪ್ರಥಮ ಈ ಕಾರ್ಯಕ್ರಮ ನನಗೆ ಸಂತಸ ತಂದಿದೆ.
ಲಿಯೋ ನಡೆ ಯುವಕರಿಗೆ ಆಶಾಕಿರಣದಂತೆ, ಅವರಲ್ಲಿರುವ ಸುಪ್ತ ಪ್ರತಿಭೆ ಹೊರಹಾಕಲು ಇದು ಅವಕಾಶ. ನಿಮ್ಮಿಂದ ಇನ್ನಷ್ಟು ಹೆಚ್ಚು ಕಾರ್ಯಕ್ರಮ ಮೂಡಿ ಬರಲಿ ಎಂದು ಶುಭ ಕೋರಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಯೋ ಅಧ್ಯಕ್ಷ ರಕ್ಷಿತ್ ಮೆಂಡನ್ ವಹಿಸಿದ್ದರು. ಜಿಲ್ಲೆಯ ಲಿಯೋ ಉಪಾಧ್ಯಕ್ಷ ನಚಿಕೇತ ನಾಯಕ್ ಶುಭಕೋರಿದರು. ಈ ಕಾರ್ಯಕ್ರಮದಲ್ಲಿ ಪ್ರಥಮ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಶುಭಾಶಂಸನೆಗೈದರು.

ಅಶೋಕ ಪಣಿಯಾಡಿ, ಮೇಟಿ ಮುದಿಯಪ್ಪ, ಜಯಪ್ರಕಾಶ ಭಂಡಾರಿ, ಸಿದ್ಧರಾಜು ಲಿಯೋ ಶ್ರೀನಿಧಿ ಹಾಗೂ ಜಿಲ್ಲೆಯ ಲಿಯೋ ಅಂಬಾಸಿಡರ್ ಸಪ್ನ ಸುರೇಶ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಜ್ಞಾ ಜೋಷಿ ಧನ್ಯವಾದ ವಿತ್ತರು. ಸುಪ್ರಿಯಾ ಪ್ರಭು  ನಿರೂಪಿಸಿದರು.
 
 
 
 
 
 
 
 
 
 
 

Leave a Reply