ಕೊಡಿ ಮೀನುಗಾರ ಪ್ರಾಥಮಿಕ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆ

ಕೋಟ: ಕೊಡಿ ಮೀನುಗಾರ ಪ್ರಾಥಮಿಕ ಸಹಕಾರಿ ಸಂಘದ 2021-22 ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಿ ಕನ್ಯಾಣ ಇಲ್ಲಿ ಜರುಗಿತು. ಸಂಘದ ಅಧ್ಯಕ್ಷ ಅಶೋಕ್ ತಿಂಗಳಾಯ ಇವರ ಅಧ್ಯಕ್ಷತೆ ವಹಿಸಿದ್ದರು.

ಸಂಘವು ವರದಿ ವರ್ಷಾದಲ್ಲಿ ಅಭಿವೃದ್ಧಿ ಸಾಧಿಸಿದ್ದು, ಸಂಘವು ೪ಕೋಟಿಗೂ ಅಧಿಕ ವ್ಯವಹಾರಿಕಾ ಬಂಡವಾಳ ಹೊಂದಿದ್ದು, ಸದಸ್ಯರಿಗೆ ೩ಕೋಟಿಗೂ ಮಿಕ್ಕಿ ಸಾಲವನ್ನು ನೀಡಿದೆ, ಒಟ್ಟು 7ಕೋಟಿ ವ್ಯವಹಾರವನ್ನು ನಡೆಸಿ ವರದಿ ವರ್ಷದಲ್ಲಿ ರೂ 7,74,692/- ನಿವ್ವಳಲಾಭ ಗಳಿಸಿದ್ದು, ಶೇಕಡಾ 8% ಡಿವಿಡೆಂಡ್ ಘೋಷಿಸಲಾಯಿತು. ಹಿರಿಯ ಮೀನುಗಾರರಾದ ಬಿ. ಕೆ.ತೇಜ ಅಂಚನ್ ಹಾಗೂ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯ ಗಣೇಶ್ ಪೂಜಾರಿ ಪಾಂಡೇಶ್ವರ ಹಾಗೂ ಹ್ಯಾಮರ್ ತ್ರೋನಲ್ಲಿ ರಾಷ್ಟçಮಟ್ಟದಲ್ಲಿ ತ್ರತೀಯ ಸ್ಥಾನಗಳಿಸಿದ ಧೀರಜ್ ಪೂಜಾರಿ ಹಾಗೂ ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ 9 ಮಂದಿ ಸದಸ್ಯರ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾತು. ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಸ್ಥೆಯ ಸದಸ್ಯರ 42 ಪ್ರತಿಭಾವಂತ ವಿದ್ಯಾರ್ಥಿ ವೇತನ ನೀಡಲಾತು. ಈ ಸಂದರ್ಭದಲ್ಲಿ ಉಡುಪಿ ಮೀನುಗಾರಿಕೆಯ ಉಪನಿರ್ದೇಶಕ ಶಿವ ಕುಮಾರ ಮಾತನಾಡಿ ಮೀನುಗಾರರಿಗೆ ಸರಕಾರದಿಂದ ಸಿಗುವ ಸಾವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಉದಯ ಕಾಂಚನ್ ಮತ್ತು ಸಂಘದ ನಿರ್ದೇಶಕರು ಉಪಸ್ಥಿತಿರಿದ್ದರು. ಸಂಘದ ಮುಖ್ಯಕಾರ್ಯನಿರ್ವಾಹಣ ಅಧಿಕಾರಿ ಅಕ್ಷಯ್ ಕುಂದರ್ ವರದಿ ವಾಚಿಸಿ ನಿರೂಪಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply