ಕೋಡಿ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ನೋಟ್ ಬುಕ್ ವಿತರಣೆ

ಕೋಟ: ಕೋಡಿ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಕೋಡಿ ಕನ್ಯಾಣ ವತಿಯಿಂದ ಜು.4ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ ಕನ್ಯಾಣ ಇಲ್ಲಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಂದರ್ಭ ಕೋಡಿ ಮೀನುಗಾರರ ಸಂಘದ ಅಧ್ಯಕ್ಷ ಅಶೋಕ ತಿಂಗಳಾಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಶುಭಹಾರೈಸಿದರು. ಸಂಘದ ಉಪಾಧ್ಯಕ್ಷ ಉದಯ ಕಾಂಚನ್, ಕಾರ್ಯದರ್ಶಿ ಅಕ್ಷಯ ಕುಂದರ್ ನಿರ್ದೇಶಕರುಗಳಾದ ಬಿ. ಲಕ್ಷ÷್ಮಣ ಸುವರ್ಣ, ಪ್ರಭಾಕರ ಮೆಂಡನ್ , ಅಣ್ಣಪ್ಪ ಕುಂದರ್, ಎ.ಜಗನ್ನಾಥ ಬಂಗೇರ, ಮಹೇಶ ಬಂಗೇರ, ವಿಜಯ ತಿಂಗಳಾಯ, ಸುಧೀರ, ತಾರಾ ಕುಮಾರಿ, ಮಂಜುಳಾ, ಚಂದ್ರ ಕಾಂಚನ್, ಮಂಜುನಾಥ ಖಾರ್ವಿ , ಸಿಬ್ಬಂಧಿ ವರ್ಗ, ಮುಖ್ಯ ಶಿಕ್ಷಕಿ ಸಂಪ ,ಶಾಲಾ ಎಸ್‌ಡಿಎಂಸಿ ಆದ್ಯಕ್ಷರು, ಅಧ್ಯಾಪಕ ವೃಂದದವರು ಮುಂತಾದವರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply