​ಕೊಡವೂರಿನಲ್ಲಿ ಬೆಳಗುತಿದೆ ವಿಜಯ ಜ್ಯೋತಿ 

ಉಡುಪಿ:  ​ಕತ್ತಲೆಯಲ್ಲಿರುವ ಗುಡಿಸಲು ಮನೆಗೆ ಬೆಳಕನ್ನು ಕಲ್ಪಿಸುವ ಜವಾಬ್ದಾರಿ ನನ್ನದು. ಹಾಗಾಗಿ ಸರಕಾರದಿಂದ ಮತ್ತು ದಾನಿ​ ​ ಶ್ರೀ ಕೃಷ್ಣಇಂಜಿನಿಯರ್ಸ್, ಉಡುಪಿ​ ಮಾಲಕ ​ ವಿ.ಆರ್.ಸುಧಾಕರ್ ಇವರ ಸಹಕಾರದಿಂದ ಕೊಡವೂರು​ ​ ಗರ್ಡೆ 4ನೇ ಅಡ್ಡರಸ್ತೆ ಇಲ್ಲಿನ ವಿದ್ಯುತ್ ಸಂಪರ್ಕ ಇಲ್ಲದ ಒಂದು ಕುಟುಂಬಕ್ಕೆ ಸೋಲಾರ್ ಲೈಟ್ ಅಳವಡಿಸಲಾಗಿದ್ದು, ಮನೆ ಮತ್ತು ಮನೆಯಲ್ಲಿರುವ ಮನಸ್ಸು ಬೆಳಗುತ್ತಿದೆ.
ಕೊಡವೂರು ವಾರ್ಡ್ ನಲ್ಲಿ ಒಟ್ಟು 2-3 ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿವೆ, ಇದರಲ್ಲಿ ಒಂದು ಮನೆಗೆ ದಾನಿಗಳ ನೆರವಿನಿಂದ ಸೋಲಾರ್ ಲೈಟ್ ವ್ಯವಸ್ಥೆ ಮಾಡಲಾಗಿದೆ, ಇನ್ನುಳಿದ ಮನೆಗಳಿಗೆ ಸೋಲಾರ್ ಲೈಟ್ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು. 

ಗುಡಿಸಲು ಮನೆಗಳಿಗೆ ವಿದ್ಯುತ್ ಲೈಟ್ ಅನುಮತಿ ಸಿಗುವುದಿಲ್ಲ, ಈ ಮನೆಯಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಹಿರಿಯರು ಇರುವುದರಿಂದ ಲೈಟಿನ ಅವಶ್ಯಕತೆ ಇದ್ದುದರಿಂದ ದಾನಿಗಳ ಸಹಾಯದಿಂದ ಸೋಲಾರ್ ಲೈಟ್ ವ್ಯವಸ್ಥೆ ಮಾಡಲಾಗಿದೆ.​ 

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಶಿವಾಜಿಪಾರ್ಕ್ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ  ಸುರೇಶ್, ಮಹಿಳಾ ಮಂಡಳಿ ​ಅಧ್ಯಕ್ಷೆ ಪ್ರೇಮಾ, ನಾರಾಯಣ ಬಲ್ಲಾಳ್, ಸಮಿತಿ ಅಧ್ಯಕ್ಷ​ ​ಪ್ರಭಾತ್ ಕೊಡವೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾ ಅಭಿವೃದ್ಧಿ ಯೋಜನೆಯ ಹಾಗೂ ವಲಯದ ಮೇಲ್ವಿಚಾರಕರಾದ ವಸಂತ ದೇವಾಡಿಗ, ಗೆಳೆಯರ ಬಳಗದ ಅಧ್ಯಕ್ಷರಾದ  ಅಮಿತ್ ಗರ್ಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಪ್ರತೀಶ್ ರವರು ಸ್ವಾಗ​ತಿಸಿ, ಧನ್ಯವಾದ​ವಿತ್ತರು 

 
 
 
 
 
 
 
 
 
 
 

Leave a Reply