ಕೊಡವೂರು ವಾರ್ಷಿಕ ಕ್ರೀಡಾಕೂಟ

ಕೊಡವೂರು ಹಳೆ ವಿದ್ಯಾರ್ಥಿ ಸಂಘ ಹಾಗು ಯುವಕ ಸಂಘ (ರಿ) ಇದರ 58 ನೇ ವಾರ್ಷಿಕ ಕ್ರೀಡಾಕೂಟವು ಡಿ.25 ರಂದು ಸ್ಥಳೀಯ ಶಾಲಾ ಮೈದಾನದಲ್ಲಿ ಜರುಗಲಿದೆ.

ಅಂದು ಬೆಳಿಗ್ಗೆ ಗಂಟೆ 9.30ಕ್ಕೆ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಉದ್ಯಮಿ ಶಿವಪ್ರಸಾದ್ ಕೋ ಟ್ಯಾನ್, ಹಾಗೂ ಊರಿನ ಗಣ್ಯರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ ಗಳು ಭಾಗವಹಿಸಲಿದ್ದಾರೆ.

ಉಭಯ ಸಂಸ್ಥೆಗಳ ಸದಸ್ಯರು,ಸ್ಥಳೀಯ ಪುರುಷರು ಮತ್ತು ಮಹಿಳೆಯರು ಕ್ರೀಡಾಕೂಟದಲ್ಲಿ ಸ್ಪರ್ಧಿ ಸಲಿದ್ದಾರೆ.ಬೆಳಿಗ್ಗೆ ಗಂಟೆ 9.30 ರಿಂದ ಪುರುಷರ ಕ್ರೀಡಾಸ್ಪರ್ಧೆಗಳು ಪ್ರಾರಂಭಗೊಳ್ಳಲಿದ್ದು,100 ಮೀ ಓಟ,200 ಮೀ ಓಟ,ಗೋಣಿ ಚೀಲ ಓಟ,ಶಾಟ್ ಪುಟ್ , ಡಿಸ್ಕಸ್,ಜಾವೆಲಿನ್,ಸ್ಲೋ ಸೈಕಲ್, ಹಗ್ಗಜಗ್ಗಾಟ , ಮಡಕೆ ಒಡೆಯುವ ಸ್ಪರ್ಧೆಗಳು ನಡೆಯಲಿವೆ.

ಅಂದು ಮಧ್ಯಾಹ್ನ ಗಂಟೆ 2.00ಕ್ಕೆ ಮಹಿಳೆಯರ ಕ್ರೀಡಾಸ್ಪರ್ಧೆಗಳು ನಡೆಯಲಿದ್ದು ಶಾಟ್ ಪುಟ್, ಡಿಸ್ಕಸ್,ಜಾವೆಲಿನ್,ಚಮಚದ ಮೇಲೆ ಲಿಂಬೆ ಇಟ್ಟು ಓಟ,ಸೂಚಿಗೆ ದಾರ ಹಾಕುವುದು, ಬಿಸ್ಕೆಟ್ ತಿನ್ನುವುದು, ಮ್ಯೂಸಿಕಲ್ ಚಿಯರ್, ತ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply