ಮಂಗಳಮುಖಿಯರಿಗೆ ಪಡಿತರ ಹಾಗೂ ಕೊವಿಡ್ ಹೆಲ್ತ್ ಕಿಟ್ ವಿತರಣೆ

ಉಡುಪಿ : – ಎಸ್ ವಿ ಪೀ ಫೌಂಡೇಶನ್ ಉಡುಪಿ ವತಿಯಿಂದ ಕರೋನಾ ಲಾಕ್ ಡೌನ್ ನಿಂದಾ ಅತೀ ತೊಂದರೆಗೊಳಗಾದ 40 ಮಂದಿ ತೃತೀಯ ಲಿಂಗಿ (ಮಂಗಳ ಮುಖಿ)ಯರಿಗೆ ಆಹಾರ ಪಡಿತರ ಮತ್ತು ಕೋವಿಡ್ ಹೆಲ್ತ್ ಕಿಟ್ N95 ಮಾಸ್ಕ, ಹ್ಯಾಂಡ್ ಸ್ಯಾನಿಟೈಸರ್, ಇಲೆಕ್ಟ್ರಾನಿಕ್ ಸ್ಟೀಮ್ಮ್ ಇನ್ಹೇಲರ್ ಇತ್ಯಾದಿಗಳನ್ನು ಸುಮಾರು ರೂಪಾಯಿ 25,000 ರೂಪಾಯಿ ವೆಚ್ಚದಲ್ಲಿ ಜೂನ್ 4 ರಂದು ಡಿಎಪಿಸಿಒಯು ನ ಕಛೇರಿಯಲ್ಲಿ ವಿತರಿಸಲಾಯಿತು. 

ಈ ವೇಳೆ ಮಾತನಾಡಿದ ಮಂಗಳಮುಖಿಯರ ಸಂಪರ್ಕ ಅಧಿಕಾರಿ, ನಮಗೆ ಲಾಕ್ ಡೌನ್ ನ ಪರಿಣಾಮ ಹಸಿವನ್ನು ನೀಗಿಸಲು, ಆರೋಗ್ಯ ಕಾಪಾಡಲು ಎಸ್ ವಿ ಪೀ ಫೌಂಡೇಶನ್ ನೀಡಿದ ಕೊಡುಗೆಗಳು ಅತ್ಯಂತ ಸಮಯೋಚಿತವಾಗಿದ್ದು ದಾನಿ ಗಳಿಗೆ ದೇವರ ಆಶೀರ್ವಾದ ಬೇಡಿದರು. ನಮಗೆ ಸಮಾಜದಲ್ಲಿ ಸಮಾನತೆಯಲ್ಲಿ ಬಾಳಲು,ಸರಕಾರಿ ಆಧಾರ್ ಕಾರ್ಡ್ ಇತ್ಯಾದಿ ಗಳನ್ನು ಪಡೆಯಲು ತೊಂದರೆಗಳ ಬಗ್ಯೆ, ಸರಕಾರಿ ಉದ್ಯೋಗದಲ್ಲಿ ಮೀಸಲಾತಿ,ಸ್ವಉದ್ಯೋಗ ಅವಕಾಶ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ,ತೃತೀಯ ಲಿಂಗಿಗಳ ಬಗ್ಗೆ ಶಾಲಾ ಪಠ್ಯದಲ್ಲಿ ವಿಷಯ ಸೇರಿಸಲು ಈ ಮೂಲಕ ಸಮಾಜದಲ್ಲಿ ಗೌರವದಿಂದ ಬಾಳಲು ಸಹಕಾರಿಯಾಗುತ್ತದೆ ಎಂದರು.

 ಎಸ್ ವಿ ಪೀ ಫೌಂಡೇಶನ್ ನ ಅಧ್ಯಕ್ಷ ಶ್ರೀ ಡೊನಾಲ್ಡ್ ಸಲ್ಡಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಚಂದ್ರಿಕಾ, ಜಿಲ್ಲಾ ಎಡ್ಸ ನಿಯಂತ್ರಣ ಕಾರ್ಯಕ್ರಮದ ಅಧಿಕಾರಿ ಚಿದಾನಂದ ಸಂಜು, ಉಪಸ್ಥಿತರಿದ್ದರು.ಡಿಎಪಿಸಿಒ ನ ಸಂಯೋಜಕ ಮಹಾಬಲೇಶ್ವರ ಸ್ವಾಗತಿಸಿ, ಡಿಎಪಿಸಿಒ‌ನ ಆಪಿಸರ್ ಚಿದಾನಂದ ಸಂಜು ವಂದಿಸಿದರು.

 
 
 
 
 
 
 
 
 
 
 

Leave a Reply