Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಬ್ರಾಹ್ಮಣ ಮಹಾ ಸಭಾ ಕೊಡವೂರು- ಸಾಮೂಹಿಕ ಬ್ರಹ್ಮೋಪದೇಶ

ಉಪವೀತಧಾರಿಯಾದ ವಟುವಿಗೆ ಉಪವಾಸದ ಮಹತ್ವವನ್ನು ವಿವರಿಸುತ್ತಾ ಉಪಾಧ್ಯಾಯನು ಉಪನಿಷತ್ತಿನ ರಹಸ್ಯವನ್ನು ಉಪದೇಶಿಸುವ ಸುಮುಹೂರ್ತವೇ ಉಪನಯನ ಎಂದು ವಿದ್ವಾನ್ ಹರಿಪ್ರಸಾದ್ ಹೆರ್ಗ ತಮ್ಮ ಪ್ರವಚನದಲ್ಲಿ ಅಭಿಪ್ರಾಯಪಟ್ಟರು.

ಅವರು ಕೊಡವೂರು ಬ್ರಾಹ್ಮಣ ಮಹಾ ಸಭಾ ಆಯೋಜಿಸಿದ್ದ ಸಾಮೂಹಿಕ ಉಪನಯನ ಸಂದರ್ಭದಲ್ಲಿ ‌ಮಾತನಾಡುತ್ತಾ ಮಂಗಳರೂಪಿ ಶಂಕರನು ಮನೋನಿಯಾಮಕನಾದರೆ , ನಾರಾಯಣನು ಗಾಯತ್ರೀ ಮಂತ್ರ ಪ್ರತಿಪಾದಕ.ಆದ್ದರಿಂದ ವಿಪ್ರರು ನಿತ್ಯ ಮಾಡಲೇಬೇಕಾದ ಕನಿಷ್ಠ ಹತ್ತು ಗಾಯತ್ರೀ ಮಂತ್ರ ವು ನಾರಾಯಣನಿಗೆ ಮುಟ್ಟಬೇಕಾದರೆ ಶಂಕರನ ಅನುಗ್ರಹವು ಅಗತ್ಯ.

ಹಾಗಾಗಿ ಕೊಡವೂರಿನ ಶಂಕರನಾರಾಯಣನ ಪದತಲದಲ್ಲಿ ಉಪನೀತಗೊಳ್ಳುವ ಈ ವಟುಗಳಿಗೆ ಶ್ರೀ ದೇವರ ಅನುಗ್ರಹದಿಂದ ಧಾರ್ಮಿಕ ಚಿಂತನೆ ಸದಾ ಇರಲಿ ಎಂಬ ಆಶಿಸಿದರು. ಸಮುದಾಯದ ಆಚಾರ್ಯರಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತ್ರತ್ವದಲ್ಲಿ, ಧಾರ್ಮಿಕ ‌ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್ ರವರ ಸಹಕಾರದಲ್ಲಿ ಶ್ರೀನಿವಾಸ ಉಪಾಧ್ಯಾಯರ ಅಧ್ಯಕ್ಷತೆಯಲ್ಲಿ ಸಪ್ತ ‌ವಟುಗಳಿಗೆ ಸತ್ ಸಂಪ್ರದಾಯರೀತ್ಯಾ ಸಾಮೂಹಿಕ ಬ್ರಹ್ಮೋಪದೇಶವು ವಿಧಿವತ್ತಾಗಿ ವಿಪ್ರಶ್ರಿಯಲ್ಲಿ ಜರುಗಿತು.

ಗೌರವಾಧ್ಯಕ್ಷರಾದ ಗೋವಿಂದ ಐತಾಳ್, ಶ್ರೀಶ ಭಟ್, ಪಿ ಗುರುರಾಜ್ ರಾವ್ ಇವರು ಪ್ರವಚನಕಾರರನ್ನು ಗೌರವಿಸಿದರು. ಮಂಜುನಾಥ ಭಟ್, ಚಂದ್ರಶೇಖರ ರಾವ್, ಶ್ರೀನಿವಾಸ ಬಾಯರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ‌ ನಿರೂಪಿಸಿ ವಂದಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!