ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ನಿಂದ ವಿಶ್ವ ಮಹಿಳಾ ದಿನಾಚರಣೆ

ಉಡುಪಿ: ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಕಾಪು ರಾಜೀವ್ ಭವನದಲ್ಲಿ ಆಚರಿಸಲಾಯಿತು. ಸಭಾಧ್ಯಕ್ಷತೆಯನ್ನು ಬ್ಲಾಕ್ ಮಹಿಳಾ ಅಧ್ಯಕ್ಷೆ ಪ್ರಭಾ ಶೆಟ್ಟಿ ಅವರು ವಹಿಸಿದ್ದರು.ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಬ್ಲಾಕ್ ನ ವಿವಿಧ ಗ್ರಾಮಪಂಚಾಯತ್ ಗಳಿಗೆ ಅಧ್ಯಕ್ಷೆ, ಉಪಾಧ್ಯಕ್ಷ ರಾಗಿ ಆಯ್ಕೆ ಯಾಗಿರುವ ಮಹಿಳೆಯರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಣಿಪಾಲ ವಿವಿ ಯ ಆಪ್ತ ಸಮಾಲೋಚಕಿ ಶಿಲ್ಪಾ ಜೋಷಿ ಅವರು ಮಾತನಾಡಿ,ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಯಂತೆ ಪುರುಷರ ಉಡುಗೆ ತೊಡುವುದು ತಪ್ಪಲ್ಲ.ಆದರೆ ನಮ್ಮ ಸಂಸ್ಕೃತಿ ಯನ್ನು ಮರೆಯಬಾರದು.ಸಮಾಜವನ್ನು ತಿದ್ದಿ ತೀಡಿ ಬೆಳೆಸಬೇಕಾದದ್ದು ಪ್ರತಿ ಮಹಿಳೆಯ ಜವಾಬ್ದಾರಿ. ಕುಟುಂಬದ ಮಾರ್ಗದರ್ಶಕಳಾಗಿ ಮಹಿಳೆಯ ಮೇಲೆ ಕೆಲವೊಂದು ಇತಿಮಿತಿಗಳಿರುತ್ತವೆ. ಆದ್ದರಿಂದ ಮಹಿಳೆಯರು ಇದನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು ಎಂದು ನುಡಿದರು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಸಭೆಯನ್ನದ್ದೇಶಿಸಿ ಮಾತನಾಡಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂರು ಮಂದಿ ಮಹಿಳೆಯರನ್ನು ಈ ವೇಳೆ ಗೌರವಿಸಲಾಯಿತು ಜ್ಯೋತಿ ಮೆನನ್ ವಂದಿಸಿದರು. ಆಶಾ ಅಂಚನ್ ಪ್ರಾರ್ಥಿಸಿ ಪ್ರಭಾಶೆಟ್ಟಿ ಸ್ವಾಗತಿಸಿದರು. ಸರಸು.ಡಿ.ಬಂಗೇರಾ,ಕಾಪು ನಗರಾಧ್ಯಕ್ಷೆ ಪ್ರಭಾವತಿ ಸಾಲಿಯಾನ್,ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಕಾಪು ವೀಕ್ಷಕರಾದ ಶಾಂತಿ ಪಿರೇರಾ,ಖಜಾಂಚಿ ಆಗ್ನೇಸ್ ಡೇಸಾ, ಉಪಾಧ್ಯಕ್ಷೆ ಜೇಬಾ ಸೆಲ್ವನ್, ಸುಮನ್ ಆಚಾರ್ಯ ಕಕ್ಕುಂಜೆ,ಸುಚರಿತ,ಪ್ರೆಸಿಲ್ಲಾ ಡಿ’ಮೆಲ್ಲೊ ಸುಮಲತಾ ಇನ್ನಂಜೆ ,ಕಾಪು ಪುರಸಭಾ ಉಪಾಧ್ಯಕ್ಷೆ ಮಾಲಿನಿ,ಸದಸ್ಯರಾದ ಶಾಂತಲತಾ ಶೆಟ್ಟಿ ಮತ್ತು ಅಶ್ವಿನಿ ನವೀನ್ ಬಂಗೇರಾ, ಸುಲೋಚನಾ ಬಂಗೇರಾ,ಉಸ್ಮಾನ್, ಗ್ರೇಸಿ ಕರ್ಡೋಜಾ,ಸಿಮ್ಮಿ,ನತಾಲಿಯಾ ಮಾರ್ಟಿಸ್,ಇಂದಿರಾ ಆಚಾರ್ಯ, ಮುಂತಾದವರು ಉಪಸ್ಥಿತರಿದ್ದರು.ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply