Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಶಾಲಾ ಬ್ಯಾಗ್ ಮತ್ತು ಲೇಖನ ಸಾಮಾಗ್ರಿಗಳ ವಿತರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಇಲ್ಲಿನ 4ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಯೂತ್ ಆಫ್ ಸೇವಾ ಸಂಸ್ಥೆ ಯಿಂದ ಶಾಲಾ ಬ್ಯಾಗ್ ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು. ವಿತರಣಾ ಸಮಾರಂಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಶೇಖರ್ ಆಚಾರ್ಯ, ಪಂಚಾಯತ್ ಸದಸ್ಯರಾದ ಶ್ರೀ ಜಗದೀಶ್ ಆಚಾರ್ಯ ಮತ್ತು ಶ್ರೀಮತಿ ಪ್ರೇಮಾ ಪೂಜಾರಿ, ಯೂತ್ ಆಫ್ ಸೇವಾ ಸಂಸ್ಥೆ ಯ ಜಿಲ್ಲಾ ನಿದೇ೯ಶಕರಾದ ಶ್ರೀಮತಿ ರಮಿತಾ ಶೈಲೇಂದ್ರ ರಾವ್, ಶಿಕ್ಷಣ ಇಲಾಖೆಯ ಶ್ರೀ ಸಂತೋಷ್ ಕುಮಾರ್, ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಕಸ್ತೂರಿ. ಎಸ್. ಉಪಸ್ಥಿತಿಯಿದ್ದರು. ಮುಖ್ಯ ಶಿಕ್ಷಕರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ವೀಣಾ.ಕಾಮತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶ್ರೀಮತಿ ರಮಿತಾ ಶೈಲೇಂದ್ರ ರಾವ್ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ತಮ್ಮ ಮುಂದಿನ ಜೀವನದಲ್ಲಿ ಸೇವಾ ಮನೋಭಾವವನ್ನು ರೂಢಿಸಿ ಕೊಳ್ಳುವಂತೆ ಪ್ರೋತ್ಸಾಹ ದಾಯಕ ಪ್ರೇರಣೆ ನೀಡಿದರು. ಕೊನೆಯಲ್ಲಿ ಸಹ ಶಿಕ್ಷಕಿ ಶ್ರೀಮತಿ ಪ್ರಮೀಳಾ ಧನ್ಯವಾದಗಳನ್ನು ಸಮಪಿ೯ಸಿ, ಕಾಯ೯ಕ್ರಮವನ್ನು ದೈಹಿಕ ಶಿಕ್ಷಕರಾದ ಶ್ರೀ ವಸಂತ ನಾಯ್ಕ್ ನಿರೂಪಿಸಿದರು.ಕಾಯ೯ಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!