ಗೆಳೆಯರ ಬಳಗ ಕಾಜಾರಗುತ್ತು ಇದರ 6 ನೇ ವಾರ್ಷಿಕೋತ್ಸವ

ಹಿರಿಯಡಕ: ಅಶೋಕ್ ಆಟೋಮೇಷನ್ಸ್ ಓಂತಿಬೆಟ್ಟು ಹಾಗೂ ಸಾಚಿ ಟ್ರಾವೆಲ್ಸ್ ಓಂತಿಬೆಟ್ಟು ಇವರ ಸಹಯೋಗದೊಂದಿಗೆ ಗೆಳೆಯರ ಬಳಗ ಕಾಜಾರಗುತ್ತು ಇದರ 6 ನೇ ವಾರ್ಷಿಕೋತ್ಸವದ ಪ್ರಯುಕ್ತ ಕೆಸರ್‌ದ ಗೊಬ್ಬು ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ವಿಶಿಷ್ಟಚೇತನರಿಗೆ ಸಹಾಯಧನ ನೀಡಲಾಯಿತು ಹಾಗೂ ಸಮಾಜ ಸೇವಕ ರವಿ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಅರುಣ್ ಶೆಟ್ಟಿ ಮಾಂಬೆಟ್ಟು, ಶ್ರೀಶ ನಾಯಕ್ ಪೆರ್ಣಂಕಿಲ, ಸಿದ್ಧಾರ್ಥ್ ಹೆಗ್ಡೆ , ಅನಿಲ್ ಶೆಟ್ಟಿ ಮಾಂಬೆಟ್ಟು, ರವೀಂದ್ರ ಶ್ರೀಯಾನ್ ಕಾಜಾರಗುತ್ತು, ಅನಿಲ್ ಶೆಟ್ಟಿ ಕಾಜಾರಗುತ್ತು, ಶ್ರೀಶ ಹೆಗ್ಡೆ ಮಾಂಬೆಟ್ಟು, ರೇಣುಕಾ ನಿತೀಶ್ ಬೋಂಟೆಮಾರ್, ರಾಘವೇಂದ್ರ ನಾಯಕ್ ಮಾಂಬೆಟ್ಟು, ಪ್ರದೀಪ್ ಶೆಟ್ಟಿ ಪಡ್ಡಮ್,ಅರುಣ್ ಶೆಟ್ಟಿ ಕೊಡಿಬೆಟ್ಟು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ 10ನೆ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತನ್ವಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೆಸರ‍್ದ ಗೊಬ್ಬು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ವೇಳೆ ಪ್ರಫುಲ್ಲ ಹೆಗ್ಡೆ, ಅನಿಲ್ ಶೆಟ್ಟಿ ಮಾಂಬೆಟ್ಟು, ರವೀಂದ್ರ ಶ್ರೀಯಾನ್, ಕೃಷ್ಣ ಕುಲಾಲ್, ಪ್ರದೀಪ್ ಶೆಟ್ಟಿ ಪಡ್ದಮ್, ರಾಘವೇಂದ್ರ ನಾಯಕ್ ಮಾಂಬೆಟ್ಟು ಉಪಸ್ಥಿತರಿದ್ದರು.

Leave a Reply