ಜೇಸಿಐ ಕಲ್ಯಾಣಪುರ ವಲಯದ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ ಹಾಗು ಘಟಕಾಧ್ಯಕ್ಷೆ ಪ್ರಶಸ್ತಿ.

ಜೆ ಸಿ ಐ ಕಾರ್ಕಳ ರೂರಲ್ ಆತಿತ್ಯದಲ್ಲಿ  ನಡೆದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಗಳನ್ನೊಳಗೊಂಡ ಜೇಸಿಐ ಭಾರತದ ಪ್ರತಿಷ್ಠಿತ ವಲಯ 15ರ ವಲಯ ಸಮ್ಮೇಳನವು ನವೆಂಬರ್ 05 ಮತ್ತು 06 ರಂದು ಸನ್ಮಾನ್ ರೆಸಿಡೆನ್ಸಿ ನಿಟ್ಟೆ ಕಾರ್ಕಳದಲ್ಲಿ ನಡೆದ ಸಮ್ಮೇಳನದಲ್ಲಿ ಜೇಸಿಐ ಕಲ್ಯಾಣಪುರವು ಈ ವರ್ಷ ಎಲ್ಲಾ ವಿಭಾಗದಲ್ಲಿ ನಡೆಸಿದಂತಹ ಕಾರ್ಯಕ್ರಮ ಹಾಗೂ ಸಾಧನೆ ಗಳಿಗಾಗಿ, ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ ಹಾಗೂ ಅತ್ಯುತ್ತಮ ಘಟಕ ಅಧ್ಯಕ್ಷ ರನ್ನರ್ ಪ್ರಶಸ್ತಿ, ಪ್ರಥಮ ವಲಯ ಅಧ್ಯಕ್ಷ ಜೇಸಿ ಯು ದುಗ್ಗಪ್ಪ ಮೆಮೋರಿಯಲ್ ರೋಲಿಂಗ್ ಟ್ರೋಫಿ,

ಡೈಮಂಡ್ ಘಟಕ ಪ್ರಶಸ್ತಿ, ಜೂನಿಯರ್ ಜೆಸಿ ವಿಂಗ್ ವಿನ್ನರ್ ಪ್ರಶಸ್ತಿ, ಅತ್ಯುತ್ತಮ ಮಹಿಳಾ ಜೆಸಿ ರನ್ನರ್, ಅತ್ಯುತ್ತಮ ಘಟಕಾಧಿಕಾರಿ ರನ್ನರ್ ಪ್ರಶಸ್ತಿ, ನ್ಯೂ ಜೆಸಿ ಮೆಂಬರ್ ಆಫ್ ದಿ ಜೋನ್ ಪ್ರಶಸ್ತಿ, ಜೇಸಿಐ ರೈಸ್ ಪ್ರಾಜೆಕ್ಟ್ ರನ್ನರ್, ಈ ವರ್ಷ ಗೋ ಗ್ರೀನ್ ವಿಭಾಗದಲ್ಲಿ ಗಿಡಗಳನ್ನು ನೆಟ್ಟು ಹಾಗು ಗಿಡಗಳನ್ನು ವಿತರಿಸಿ ಉತ್ತಮ ಕಾರ್ಯ ಕ್ರಮ ಆಯೋಜಿಸಿದಕ್ಕೆ ಸಾಲು ಮರದ ತಿಮ್ಮಕ್ಕ ಟ್ರೋಫಿ ಹಾಗೂ 20ಕ್ಕಿಂತಲೂ ಹೆಚ್ಚು ಮನ್ನಣೆ ಗಳನ್ನು ಅಧ್ಯಕ್ಷರಾದ ಜೆಸಿ ಜಯಶ್ರೀ ರವರು ವಲಾಧ್ಯಕ್ಷರಾದ ಜೆಸಿ ರೊಯನ್ ಉದಯ ಕ್ರಾಸ್ತ ರವರಿಂದ ಪಡೆದರು.

 

ಈ ಸಂದರ್ಭದಲ್ಲಿ ಜೇಸಿಐ ಕಲ್ಯಾಣಪುರದ ಎಲ್ಲಾ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply