Janardhan Kodavoor/ Team KaravaliXpress
28.6 C
Udupi
Monday, December 5, 2022
Sathyanatha Stores Brahmavara

​ ಜೆಸಿಐ ಉಡುಪಿ ಇಂದ್ರಾಳಿ ಘಟಕದ ಜೆಸಿಐ ಸಪ್ತಾಹದ ಸಮಾರೋಪ 

ಉಡುಪಿ :-ಜೆಸಿಐ ಉಡುಪಿ ಇಂದ್ರಾಳಿ ಘಟಕದ 2020ನೇ ಸಾಲಿನ ಜೆಸಿಐ ಸಪ್ತಾಹದ  ಸಮಾರೋಪ ಸಮಾರಂಭವು ಘಟಕದ ಅಧ್ಯಕ್ಷ   ಎಂ ಎನ್ ನಾಯಕ್ ಮತ್ತು ಸರ್ವ ಸದಸ್ಯರ ಸಹಭಾಗಿತ್ವದೊಂದಿಗೆ ವಲಯಾಧ್ಯಕ್ಷ ಕಾತಿ೯ಕೇಯ ಮಧ್ಯಸ್ಥ ಹಾಗೂ ವಲಯ ಉಪಾಧ್ಯಕ್ಷ  ಮೇಧಾವಿ ಇವರ ಉಪಸ್ಥಿತಿಯಲ್ಲಿ ಸೆ.15ರಂದು  ಮಣಿಪಾಲದ ಹೋಟೆಲ್ ಮಧುವನ ಸೇರಾಯ್ ನ  ” ಮೈತ್ರಿ ಹಾಲ್” ನಲ್ಲಿ ನಡೆಯಿತು.
ಈ ಸಂದಭ೯ದಲ್ಲಿ ​ ​ವಿಶೇಷ ಕೊಡುಗೆಯಾಗಿ 11 ಜನ ಪ್ರತಿಭಾನ್ವಿತ ಯಾವುದೇ ಸರಕಾರಿ ವಿದ್ಯಾರ್ಥಿ ವೇತನ ಪಡೆಯದ ವರ್ಗದ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸುಮಾರು 69ಸಾವಿರ ರೂ. ದೇಣಿಗೆಯ ಯನ್ನು ಸಾರ್ವಜನಿಕವಾಗಿ ಮತ್ತು ಸದಸ್ಯ ಮಿತ್ರರು ಸೇರಿ ಸಂಗ್ರಹಣೆ ಮಾಡಿದ್ದನ್ನು ನೀಡಲಾಯಿತು.  ಜೆಸಿಐ ಭಾರತದ  ಸ್ವಚ್ಛ ಜಲ ಕಾರ್ಯಕ್ರಮದ ಅಡಿಯಲ್ಲಿ ಮಣಿಪಾಲದ ನಗರಸಭಾ ಕಟ್ಟಡದಲ್ಲಿ ಇರುವ ಗ್ರಾಮ ಕರಣಿಕರ ಕಚೇರಿಗೆ ವಾಟರ್ ಪ್ಯೂರಿಫೈರ್ ನ ಕೊಡುಗೆ ಹಾಗೂ ಫಿಟ್ ಇಂಡಿಯಾದ ಕಾರ್ಯಕ್ರಮ ದ ಅಂಗವಾಗಿ ಸ್ಯಾನಿಟೈಸರ್ ಸ್ಟಾಂಡ್ ವಿಥ್ ಸ್ಯಾನಿಟೈಸರ್ ಕೊಡುಗೆಯಾಗಿ ನೀಡಲಾಯಿತು.

ಕಾಯ೯ಕ್ರಮದಲ್ಲಿ ಫಟಕದ ಸದಸ್ಯರು ಭಾಗವಹಿಸಿದ್ದರು.​ ಸಾರ್ವಜನಿಕ ರಿಗೆ ಮಾಸ್ಕ್ ವಿತರಣೆ, ರಕ್ತದಾನ ಶಿಬಿರ, ಪೇಪರ್ ಬ್ಯಾಗ್ ವಿತರಣೆ, ಪ್ಲಾಸ್ಮಾ ಡೊನೇಷನ್ ಅವರ್ನೇಸ್, ನೋ ಪ್ಲಾಸ್ಟಿಕ್ ಅವರ್ನೇಸ್ ಇತ್ಯಾದಿ ಕಾರ್ಯಕ್ರಮ ಗಳನ್ನು ಯಶಸ್ವಿ ಯಾಗಿ ಈ ಸಪ್ತಾಹದಲ್ಲಿ ಮಾಡಲಾಗಿದೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!