Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಜೆಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ

ಸಾಮಾಜಿಕ ಸಂಘಟನೆಗಳು ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಿ ಗಿಡಗಳನ್ನು ನೆಟ್ಟು ಬೆಳೆಸುವುದಲ್ಲದೆ, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಉತ್ತಮ ಕಾರ್ಯ. ಅನೇಕ ತರಬೇತಿ ಹಾಗೂ ಸಾಮಾಜಿಕ ಉಪಯೋಗ ಕಾರ್ಯಗಳನ್ನು ಮಾಡುವುದಲ್ಲದೆ ಕುಟುಂಬ ಸಮ್ಮಿಲನ ದಂತಹ ಕಾರ್ಯಗಳ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸುವುದು ಶ್ಲಾಘನೀಯ ಎಂದು ಜೇಸಿ ವಲಯ 15ರ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಜೇಸಿ. ಡಾ. ಬಾಲಕೃಷ್ಣ ಕುಮಾರ್ ರವರು ಹೇಳಿದರು.
ಅವರು ಜೆಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ನರಿಕೊಂಬು ಶ್ರೀ ನಿವಾಸ ದಲ್ಲಿ ನಡೆದ ಪರಿಸರ ದಿನಾಚರಣೆ, ಬಹುಮಾನ ವಿತರಣೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಪದವಿಪೂರ್ವ ಕಾಲೇಜು ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಮೂಡ ಪದವಿ ಪೂರ್ವ ಕಾಲೇಜಿನ ಕು. ರಕ್ಷಿತಾ, ಪ್ರಥಮ ಬಹುಮಾನ, ಬಿ. ಮೂಡ ಪದವಿ ಪೂರ್ವ ಕಾಲೇಜಿನ ಕು. ದಿಶಾ ದ್ವಿತೀಯ ಬಹುಮಾನ, ಪ್ರೌಢಶಾಲಾ ವಿಭಾಗದಲ್ಲಿ ಕಾರ್ಕಳ ಜ್ಞಾನ ಸುಧಾ ಪ್ರೌಢಶಾಲೆ ಯ ಕು. ಸಹನಾ ಪ್ರಥಮ ಬಹುಮಾನ, ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಕು. ಧೃತಿ ದ್ವಿತೀಯ ಬಹುಮಾನ, ಕಾರ್ಕಳ ಜ್ಞಾನಸುಧಾ ಪ್ರೌಢಶಾಲೆಯ ಕು. ಮಾನಸ ಬಿ ಆಚಾರ್ಯ ಪ್ರೋತ್ಸಾಹಕ ಬಹುಮಾನ, ಪರಿಸರ ಗೀತೆ ರಚನೆಯಲ್ಲಿ ಪುತ್ತೂರು ಕೊಡಿಂಬಾಡಿ ಶಾಂತಿನಗರ ಪ್ರೌಢಶಾಲೆಯ ಕು.ಪ್ರಜ್ಞಾ ಪ್ರಥಮ, ಕುಲಶೇಖರ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ವಿನೀಶಾ ಡ್ಯಾಪ್ನಿ ದ್ವಿತೀಯ, ಬೆಳ್ತಂಗಡಿ ಸೈಂಟ್ ಮೇರಿಸ್ ಪ್ರೌಢಶಾಲೆಯ ಕು. ಸಹನಾ ಕೃಷ್ಣಮೂರ್ತಿ ಪ್ರೋತ್ಸಾಹಕ ಬಹುಮಾನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷರಾದ ಹರಿಪ್ರಸಾದ್ ಕುಲಾಲ್ ವಹಿಸಿದ್ದರು. ಕಾರ್ಯದರ್ಶಿ ಕಿಶನ್ ಎನ್ ರಾವ್ ವಂದಿಸಿದರು.
ಜೆಸಿಐ ಸದಸ್ಯರು ಹಣ್ಣು ಮತ್ತು ಔಷಧೀಯ ಸಸ್ಯಗಳನ್ನು ನೆಟ್ಟರು. ಪೂರ್ವಾಧ್ಯಕ್ಷರಾದ ರಾಮಚಂದ್ರರಾವ್ ನೇತೃತ್ವದಲ್ಲಿ ಸದಸ್ಯರ ಪ್ರತಿಭಾ ಶೋಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!