Janardhan Kodavoor/ Team KaravaliXpress
31.6 C
Udupi
Wednesday, December 8, 2021
Sathyanatha Stores Brahmavara

ತುಳುಕೂಟ ಉಡುಪಿಗೆ ಬಿ. ಜಯಕರ ಶೆಟ್ಟಿ ಇಂದ್ರಾಳಿಯ ಸಾರಥ್ಯ

ಉಡುಪಿ: ಕರಾವಳಿಯ ಪ್ರತಿಷ್ಠಿತ ಸಾಂಸ್ಕøತಿಕ ಕಲಾಸಂಸ್ಥೆ ತುಳುಕೂಟ ಉಡುಪಿ(ರಿ.) ಇದರ 2021-22ನೇ ನೂತನ ಅಧ್ಯಕ್ಷರಾಗಿ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ, ಸಂಘಟಕ  ಬಿ. ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆ ಯಾಗಿದ್ದಾರೆ.

ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ತುಳುಕೂಟ ಉಡುಪಿ ಇದರ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸದಾಶಿವ ಭಟ್, ಮನೋರಮ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಾಗಿ ಗಂಗಾಧರ ಕಿದಿಯೂರ್, ಜತೆಕಾರ್ಯದರ್ಶಿಗಳಾಗಿ ಮೋಹನ್ ಶೆಟ್ಟಿ ಮೂಡನಿಡಂಬೂರು, ಸರೋಜಾ ಯಶವಂತ್, ಕೋಶಾಧಿಕಾರಿಯಾಗಿ ಎಂ. ಜಿ. ಚೈತನ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಮನೋಹರ್ ಶೆಟ್ಟಿ ತೋನ್ಸೆ, ಸಂತೋಷ್ ಕುಮಾರ್, ಆಂತರಿಕ ಲೆಕ್ಕಪರಿಶೋಧಕರಾಗಿ ಯು. ಜೆ. ದೇವಾಡಿಗ, ತುಳು ಮಿನದನ ಕಾರ್ಯಕ್ರಮ ಸಂಚಾಲಕರಾಗಿ ಯಾದವ ವಿ. ಕರ್ಕೇರ, ಕೆಮ್ತೂರು ನಾಟಕ ಸ್ಫರ್ಧೆ ಸಂಚಾಲಕರಾಗಿ ಪ್ರಭಾಕರ ಭಂಡಾರಿ,
ನಿಟ್ಟೂರು ತುಳು ಭಾವಗೀತೆ ಸ್ಪರ್ಧೆ ಸಂಚಾಲಕರಾಗಿ ಪ್ರಕಾಶ್ ಸುವರ್ಣ ಕಟಪಾಡಿ, ಪಣಿಯಾಡಿ ಕಾದಂಬರಿ ಸ್ಫರ್ಧೆ  ಸಂಚಾಲಕರಾಗಿ ತಾರಾ ಆಚಾರ್ಯ, ಮದರಂಗಿದ ರಂಗ್ ಸ್ಪರ್ಧೆ ಸಂಚಾಲಕರಾಗಿ ಯಶೋಧಾ ಕೇಶವ್, ಆಟಿದ ಕಷಾಯ ಕಾರ್ಯಕ್ರಮ ಸಂಚಾಲಕರಾಗಿ ರತ್ನಾಕರ ಇಂದ್ರಾಳಿ, ಸೋನದ ಸೇಸೆ ಕಾರ್ಯಕ್ರಮ ಸಂಚಾಲಕರಾಗಿ ಶೇಖರ್ ಕಲ್ಮಾಡಿ, ತುಳುವೆರೆ ಗೊಬ್ಬುಲು ಸ್ಫರ್ಧೆ ಸಂಚಾಲಕರಾಗಿ ದಿವಾಕರ್ ಸನಿಲ್, ತುಳುವನಡಕೆ ಸ್ಫರ್ಧೆ ಸಂಚಾಲಕರಾಗಿ ದಯಾನಂದ ಡಿ, ಶಾಲಾ ಪಠ್ಯ ಸ್ಫರ್ಧೆ ಸಂಚಾಲಕರಾಗಿ ವಿವೇಕಾನಂದ ಎನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷೀಕಾಂತ್ ಬೆಸ್ಕೂರ್. 
ಣೇಶ್ ಕೋಟ್ಯಾನ್, ಮೊಹಮ್ಮದ್ ಮೌಲಾ, ಹಫೀಜ್ ರೆಹಮಾನ್, ಯು.ಎಸ್. ಉಮ್ಮರ್, ಗೋಪಾಲ್ ಕೆ, ಪ್ರಸನ್ನ ಟಿ. ಕೆ, ಅಶೋಕ್ ಡಿ. ಶೆಟ್ಟಿ, ಶೋಭಾ ಶೆಟ್ಟಿ, ಜಯರಾಮ್ ಶೆಟ್ಟಿಗಾರ್ ಎಂ, ಉದಯ ಕುಮಾರ್ ಇನ್ನ, ರವಿಶಂಕರ್ ರೈ, ಭುವನ ಪ್ರಸಾದ ಹೆಗ್ಡೆ,  ದಯಾನಂದ ಶೆಟ್ಟಿ ದೆಂದೂರ್, ವೇದಾವತಿ ಶೆಟ್ಟಿ, ವಿದ್ಯಾ ಸರಸ್ವತಿ, ರಶ್ಮೀ ರಮೇಶ್ ಶೆಣೈ, ಶಿಲ್ಪಾ ಜೋಷಿ, ಜ್ಯೋತಿ ಎಸ್. ದೇವಾಡಿಗ, ಸ್ಥಾಪಕಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್, ಗೌರವ ಸಲಹೆಗಾರರಾಗಿ ಬನ್ನಂಜೆ ಬಾಬು ಅಮೀನ್,
ಮುರಳೀಧರ ಉಪಾಧ್ಯಾಯ, ವಿಶ್ವನಾಥ ಶೆಣೈ, ವಿ.ಜಿ. ಶೆಟ್ಟಿ, ದಿವಾಕರ ಶೆಟ್ಟಿ ಸಾಂಗ್ಲಿ, ಎಸ್. ವಿ. ಭಟ್, ಶಾಂತಾರಾಮ ಶೆಟ್ಟಿ, ಜಿ. ಆರ್.ರೈ, ಡಾ. ಗಣನಾಥ ಎಕ್ಕಾರ್, ರಮೇಶ ಬಂಗೇರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!