ಸಾಯ್ಬರಕಟ್ಟೆ ಮಹಾತ್ಮಾ ಗಾಂಧಿ ಪ್ರೌಢ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಪದಗ್ರಹಣ

ಮಹಾತ್ಮಾ ಗಾಂಧಿ ಪ್ರೌಢ ಶಾಲೆ ಸಾಯ್ಬರಕಟ್ಟೆ ಇದರ 2021-22 ನೆಯ ಸಾಲಿನ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಸಮಾರಂಭವು ರೋಟರಿ ಕ್ಲಬ್ ಸಾಯ್ಬರಕಟ್ಟೆಯ ಪ್ರಾಯೋಜಕತ್ವದಲ್ಲಿ ನಡೆಯಿತು. ಪದಪ್ರದಾನ ಅಧಿಕಾರಿಗಳಾಗಿ ರೋಟರಿ ಜಿಲ್ಲಾ ಇಂಟರಾಕ್ಟ್ ವೈಸ್ ಚೇರ್ಮನ್ ರೋ. ಆನಂದ್ ಶೆಟ್ಟಿಯವರು ನೂತನ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಿಗೆ ಪದಪ್ರದಾನ ಮಾಡಿದರು.
ಬಳಿಕ ಮಾತನಾಡುತ್ತಾ “ವ್ಯಕ್ತಿಯಿಂದ ವ್ಯಕ್ತಿತ್ವದೆಡೆಗೆ, ಸ್ವಾರ್ಥದಿಂದ ನಿಸ್ವಾರ್ಥದೆಡೆಗೆ, ಸ್ವಹಿತ ದಿಂದ ಪರಹಿತದೆಡೆಗೆ ಚಿಂತನೆಮಾಡಲು ಇಂಟರಾಕ್ಟ್ ನಂತಹ ಸಂಸ್ಥೆಗಳು ಸಹಾಯಕ. ಇಂತಹ ಸಂಸ್ಥೆಗಳಲ್ಲಿ ಎಳವೆಯಿಂದಲೇ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ಪರಿಪೂರ್ಣಗೊಳ್ಳಲು
ಸಹಾಯವಾಗುವುದು” ಎಂದರು. 
ಇಂಟರಾಕ್ಟ್ ಝೋನಲ್ ಸಮನ್ವಯಕಾರ ರೋ. ರಾಜಾರಾಮ ಐತಾಳ ಶುಭಹಾರೈಸಿದರು. ವಲಯ ಪ್ರತಿನಿಧಿ ರೋ. ವಿಜಯಕುಮಾರ ಶೆಟ್ಟಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಳ್ಳುವಂತೆ ಸೂಚಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರವೀಂದ್ರನಾಥ ಶೆಟ್ಟಿ , ರೋಟರಿ ಕ್ಲಬ್ ನ ಕಾರ್ಯದರ್ಶಿ ಅಣ್ಣಯ್ಯದಾಸ್,  ಯೂಥ್ ಚೇರ್ಮನ್ ಅಜಿತ್ ಜೋಗಿ ಹಾಗೂ ಕ್ಲಬ್ ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪೂರ್ವಾಧ್ಯಕ್ಷ ರೋ.ಶ್ರೀಕೃಷ್ಣ ಶಾನುಭಾಗ್ ರವರ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸಾಯ್ಬರಕಟ್ಟೆಯ ಅಧ್ಯಕ್ಷ ರೋ. ಪ್ರಸಾದ ಭಟ್  ವಹಿಸಿ  “ಸೇವೆ ಮಾಡಲು, ಎಲ್ಲಕ್ಕಿಂತ ತೊಡಗಿ ಸಿಕೊಳ್ಳುವ ಮನಸ್ಸೂ ಮುಖ್ಯ “ಎಂದು ತಿಳಿಸಿದರು. ಇಂಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷೆ ಕುಮಾರಿ ಮಾನ್ಯ, ಕಾರ್ಯದರ್ಶಿ ಕುಮಾರ ಚಿನ್ನ, ನಿಕಟಪೂರ್ವಾಧ್ಯಕ್ಷೆ ಕುಮಾರಿ ಐಶ್ವರ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಸ್ವಾಗತಿಸಿ, ಶಿಕ್ಷಕಿ ಡೈಸಿ ಡಿಸಿಲ್ವ ವಂದಿಸಿದರು. ಶಿಕ್ಷಕ ಶಿರಿಯಾರ ಗಣೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
 
 
 
 
 
 
 
 
 
 
 

Leave a Reply