ಇಂದ್ರಾಳಿಯಲ್ಲಿ ಬುಡೋಕಾನ್ ಕರಾಟೆ ಎಂಡ್ ‌ಸ್ಪೋರ್ಟ್ಸ್ ಅಸೋಸಿಯೇಶನ್ ನ ನೂತನ ತರಬೇತಿ ಕೇಂದ್ರ ಉದ್ಘಾಟನೆ

ಉಡುಪಿ : ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಉಡುಪಿ ಇದರ ನೂತನ ತರಬೇತಿ ಕೇಂದ್ರವು ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು.

ಬುಡೊಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ಇದರ ಮುಖ್ಯ ಶಿಕ್ಷಕ ರೆಂಷಿ ವಾಮನ್ ಪಾಲನ್ ಸಂಸ್ಥೆಯ ಪರಿಚಯವನ್ನು ನೀಡಿ ಕರಾಟೆ ಕಲೆಯ ಮಹತ್ವವನ್ನು ವಿವರಿಸಿದರು.ಇಂದ್ರಾಳಿಯ ನೂತನ ಕರಾಟೆ ತರಗತಿ ಕೇಂದ್ರವನ್ನು ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಲಿ. ಉಡುಪಿ ಇದರ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿ, ಪ್ರಸಕ್ತ ದಿನಗಳಲ್ಲಿ ಕರಾಟೆ ಕಲೆಯನ್ನು ಕರಗತ ಮಾಡಿಕೊಳ್ಳುವ ಔಚಿತ್ಯವನ್ನು ಒತ್ತಿ ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಶ್ರೀಧರ್ ಭಟ್, ವ್ಯವಸ್ಥಾಪಕರು, ಇಂದ್ರಾಣಿ ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನ, ಇಂದ್ರಾಳಿ ಹಾಗೂ ಅಶೋಕ್ ನಾಯ್ಕ್, ನಗರಸಭಾ ಸದಸ್ಯರು ಸಭೆಯನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರತ್ನಾಕರ ಎಸ್. ಇಂದ್ರಾಳಿ, ಉದ್ಯಮಿ ಮತ್ತು ಸಾಮಾಜಿಕ ಮುಂದಾಳು ಇವರು ಅಧ್ಯಕ್ಷೀಯ ನುಡಿಗಳನ್ನಾಡಿ ನೂತನ ಕರಾಟೆ ಕೇಂದ್ರಕ್ಕೆ ಶುಭ ಹಾರೈಸಿದರು.ಬುಡೋಕಾನ್‌ ಕರಾಟೆ ಎಂಡ್ ‌ಸ್ಪೋರ್ಟ್ಸ್ ಅಸೋಸಿಯೇಷನ್ ಇದರ ಮುಖ್ಯ ಶಿಕ್ಷಕ ಹಾಗೂ ‌ಮುಖ್ಯ ಪರೀಕ್ಷಕ ರೆಂಷಿ ವಾಮನ್ ಪಾಲನ್, ಇಂದ್ರಾಳಿ ಕರಾಟೆ ತರಗತಿಯ ಶಿಕ್ಷಕ ನಿಶಾಂತ್ ಉಪಸ್ಥಿತರಿದ್ದರು.

ಬುಡೋಕಾನ್ ಕರಾಟೆ ಎಂಡ್ ‌ಸ್ಪೋರ್ಟ್ಸ್ ಅಸೋಸಿಯೇಷನ್ ಸದಸ್ಯೆ ರಿಶಾ ಪ್ರಾರ್ಥನೆ ಹಾಡಿದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಸದಸ್ಯ ಮಹಮ್ಮದ್ ರಾಹಿಲ್ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಸೆಂಶೈ ಮೇಘ ವಂದಿಸಿದರು.

 
 
 
 
 
 
 
 
 
 
 

Leave a Reply