ಹ್ಯುಮಾನಿಟಿ ಸರ್ವಿಸ್ ಡಿಫೆನ್ಸ್ ಪೋರ್ಸ್ ತಂಡದಿಂದ ಆಹಾರ ಕಿಟ್ ವಿತರಣೆ

ಉಡುಪಿ:ಹ್ಯುಮಾನಿಟಿ ಸರ್ವಿಸ್ ಡಿಫೆನ್ಸ್ ಪೋರ್ಸ್ ಉಡುಪಿ ಈ ತಂಡದಿಂದ ರಂಝಾನ್ ಈದ್ ದಿನದ ಅಂಗವಾಗಿ ಚಿಸ್ತಿಯ್ಯಾ ದ್ರಿಕ್ಸ್ ಸ್ವಲಾತ್ ಚಾರಿಟಬಲ್ ಕಮಿಟಿಯ ಸಹಕಾರದೊಂದಿಗೆ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಆಹಾರ ಕಿಟ್ ವಿತರಿಸಲಾಯಿತು.

ಉಡುಪಿ ಬಸ್ ನಿಲ್ದಾಣ ,ಕಲ್ಸಂಕ, ಅಜ್ಜರಕಾಡು, ಸಂತೆಕಟ್ಟೆ, ಬ್ರಹ್ಮಾವರ ಪರಿಸರದಲ್ಲಿರುವ ಹಲವು ನಿರಾಶ್ರಿತರಿಗೆ, ಬಿಕ್ಷುಕರಿಗೆ, ಅಸಾಹಾಯಕರಿಗೆ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ್ ಸಿಬ್ಬಂದಿಗಳಿಗೆ 200 ಕ್ಕು ಮಿಕ್ಕ ಆಹಾರ ಪೊಟ್ಟಣ ನೀಡಲಾಯಿತು. ಇದೇ ವೇಳೆ ಡಿಪೆನ್ಸ್ ಪೊರ್ಸ್ ತಂಡದ ಉಪಾಧ್ಯಕ್ಷ ರಿಝ್ವಾನ್ ಕೃಷ್ಣಾಪುರ ನೇತ್ರತ್ವದಲ್ಲಿ ಸುರತ್ಕಲ್ ಭಾಗದಲ್ಲಿ ನಿರಾಶ್ರಿತರಿಗೆ ಆಹಾರ ಕಿಟ್ ನೀಡಲಾಯಿತು.

 ಎಸ್.ಎಸ್.ಎಫ್ ಉಡುಪಿ ಡಿವಿಷನ್ ಅಧ್ಯಕ್ಷ ಸೈಯ್ಯೆದ್ ಯೂಸುಫ್ ಹೂಡೆ ತಂಙಲ್ ದುವಾದೊಂದಿಗೆ ಚಾಲನೆ ನೀಡಿದರು. ಡಿಫೆನ್ಸ್ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ‌ಕಟಪಾಡಿ ಇವರ ಅಧ್ಯಕ್ಷತೆಯಲ್ಲಿ, ತಾಜುಲ್ ಉಲಮಾ ರಿಲೀಫ್ ಸೆಲ್ ನ ಅಧ್ಯಕ್ಷ ರಝಾಕ್ ಉಸ್ತಾದ್ ಉದ್ಘಾಟಿಸಿದರು. ಡಿಫೆನ್ಸ್ ಸಮಿತಿಯ ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ಸ್ವಾಗತಿಸಿ, ವಂದಿಸಿದರು. ತಂಡದ ಸದಸ್ಯರಾದ ನಾಸೀರ್ ಭದ್ರಗಿರಿ, ನಝೀರ್ ಸಾಸ್ತಾನ, ಇಮ್ತಿಯಾಝ್ ಹೊನ್ನಾಳ, ಬಿಲಾಲ್ ಮಲ್ಪೆ, ಅಪ್ನಾನ್, ಸರ್ಪರಾಝ್, ಅಲ್ತಾಪ್ ಮಲ್ಪೆ , ಸಲ್ಮಾನ್ ಮಣಿಪುರ, ಸೈಯ್ಯೆದ್ ಅಸ್ರಾರ್ ತಂಙಲ್, ಮಬೀನ್ ಹೊನ್ನಾಳ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply