ಆಮ್ಲಜಕದ ಕೊರತೆಗೆ ಮಣಿಪಾಲದ ಹೊಸಬೆಳಕು ಸೇವಾ ಟ್ರಸ್ಟ್ (ರಿ.) ನಿಂದ ನೂತನ ಯೋಜನೆ

ಉಡುಪಿ: ಉಸಿರಾಡಲು ಶುದ್ಧ ಗಾಳಿ ಬೇಕು, ಕುಡಿಯಲು ಶುದ್ಧ ನೀರು ಬೇಕು ಅನ್ನುವುದು ಸಹಜ, ಆದರೆ ಯಾರೊಬ್ಬರು ಗಿಡ ನೆಡಬೇಕು ಅದನ್ನ ಪೋಷಣೆ ಮಾಡಬೇಕು ಅನ್ನುವ ಯೋಚನೆ ಮಾತ್ರ ಕಡಿಮೆ. ಮಣಿಪಾಲದ ಹೊಸಬೆಳಕು ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು “ಹಸಿರು ಅಭಿಯಾನಕ್ಕೆ” ಚಾಲನೆ ನೀಡಲಾಯಿತು. ವಾರಾಂತ್ಯದ ಕರ್ಫ್ಯೂ ಸಮಯ ವ್ಯರ್ಥ ಮಾಡದೆ ಹೊಸಬೆಳಕು ಆಶ್ರಮದ ನಿವಾಸಿಗಳು ಸೇರಿ ಇಂದು ಹಲವಾರು ಗಿಡ ನೆಡಲಾಯಿತು.

ಕೇವಲ ಒಂದು ಕಾಯಿಲೆಗೆ ಆಕ್ಸಿಜನ್ ಪೂರೈಸಲು ಮನುಕುಲ ಒದ್ದಾಡುತ್ತಿದೆ. ಇನ್ನೂ ಇಡೀ ವ್ಯವಸ್ಥೆಗೆ ಆಕ್ಸಿಜನ್ ನೀಡಲು ಕೆಲಸ ಹೇಗೆ ಆಗುತ್ತಿರಬಹುದು ಯೋಚಿಸಿ. ದೇವರಿಗೆ ಧನ್ಯವಾದ‌ ಅರ್ಪಿಸಿ ಒಂದು ಗಿಡವನ್ನು ಅವಶ್ಯಕವಾಗಿ ನೆಡಿ ಎಂಬ ಕರೆ ನೀಡಲಾಯಿತು.

 ಹೊಸಬೆಳಕು ಸಂಸ್ಥೆಯ ತನುಲಾ ತರುಣ್, ವಿನಯಚಂದ್ರ, ಗೌರೀಶ, ಸರಳೆಬೆಟ್ಟುವಿನ ಸ್ಥಳೀಯರು, ಹೊಸಬೆಳಕು ಆಶ್ರಮದ ನಿವಾಸಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದರು.

 
 
 
 
 
 
 
 
 
 
 

Leave a Reply