ಹಸಿರು ಬಾರ್ಕೂರು ಹಾಗೂ ಔಷಧೀಯ ವನ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ

ಬ್ರಹ್ಮಾವರ : ಇಂದು ರೋಟರಿ ಕ್ಲಬ್ ಬ್ರಹ್ಮಾವರ, ರೋಟರಿ ಕ್ಲಬ್ ಬಾರ್ಕೂರು, ನಮ್ಮೂರು ಬಾರ್ಕೂರು ಫೇಸ್ಬುಕ್ ಫ್ರೆಂಡ್ಸ್, ಶ್ರೀ ವೀರಮಾರುತಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಬಾರ್ಕೂರು ಟೀಮ್ ಅಭಿಮತ ಇವರ ಜಂಟಿ ಆಶ್ರಯದಲ್ಲಿ ಹಸಿರು ಬಾರ್ಕೂರು ಹಾಗೂ ಔಷಧೀಯ ವನ ಪುನಶ್ಚೇತನ ಕಾರ್ಯಕ್ರಮಕ್ಕೆ ಹನೇಹಳ್ಳಿ ಶಾಲೆ ಬಳಿ ಚಾಲನೆ ನೀಡಲಾಯಿತು.

ರೋಟರಿ ಜಿಲ್ಲೆ 3182 ವಲಯ 3 ರ ಸಹಾಯಕ ಗವರ್ನರ್ ಕೆ.ಪದ್ಮನಾಭ ಕಾಂಚನ್(C.A) ರೋಟರಿ ಬ್ರಹ್ಮಾವರದ ಅಧ್ಯಕ್ಷ ರೋ. ಹರೀಶ್ ಕುಂದರ್, ಬಾರಕೂರು ರೋಟರಿಯ ಅಧ್ಯಕ್ಷ ರೋ. ಚರಣ್ ಶೆಟ್ಟಿ,ಬ್ರಹ್ಮಾವರ ರೋಟರಿಯ ನಿಕಟಪೂರ್ವ ಅಧ್ಯಕ್ಷ ರೋ. ತಿಮ್ಮಪ್ಪ ಶೆಟ್ಟಿ ಆರೂರು, ಬಾರ್ಕೂರು ರೋಟರಿಯ ನಿಕಟಪೂರ್ವ ಅಧ್ಯಕ್ಷರಾದ ರೋ. ವಾಸುದೇವ ಶೆಟ್ಟಿ ,ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಶಾಂತಾರಾಮ್ ಶೆಟ್ಟಿ, ಬಾರಕೂರು ನ್ಯಾಶನಲ್ ಪದವಿಪೂರ್ವ ಕಾಲೇಜಿನ ಮಾಜಿ ಪ್ರಾಂಶುಪಾಲ ಬಿ.ಸೀತಾರಾಮ್ ಶೆಟ್ಟಿ, ಟೀಮ್ ಅಭಿಮತ’ದ ಸಂಚಾಲಕ ವಸಂತ್ ಗಿಳಿಯಾರ್, ಶ್ರೀ ವೀರಮಾರುತಿ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ನ ರಜತ್ ಮತ್ತು ರಕ್ಷಿತ್ ಬಾರ್ಕೂರು 

ಹನೇಹಳ್ಳಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಸುಧಾಕರ್ ರಾವ್, ಬೆಂಗಳೂರು ಬಂಟರ ಸಂಘದ ಸಾಂಸ್ಕೃತಿಕ ಚಿಂತಕ ದೀಪಕ್ ಶೆಟ್ಟಿ, ನಮ್ಮೂರು ಬಾರಕೂರು ಗ್ರೂಪ್ ಕಾರ್ಯನಿರ್ವಾಹಕ ಆನಂದ್ ಕುಮಾರ್ ಬಾರ್ಕೂರು , ಗಣೇಶ್ ಶೆಟ್ಟಿ , ಬಿ.ಉದಯ ಪೂಜಾರಿ ಬಾರಕೂರು ಹಾಗೂ ಬ್ರಹ್ಮಾವರ ರೋಟರಿ ಕ್ಲಬ್ ಇದರ ಎಲ್ಲಾ ಪದಾಧಿಕಾರಿಗಳು, ಹಾಗೂ ಸದಸ್ಯರು,ಸ್ಥಳೀಯ ಗಣ್ಯರು, ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ ಆಲ್ವಿನ್ ಆಂದ್ರಾದೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಾಂಕೇತಿಕವಾಗಿ ರೋಟರಿ ಜಿಲ್ಲೆ 3182 ವಲಯ 3 ರ ಸಹಾಯಕ ಗವರ್ನರ್ ಕೆ.ಪದ್ಮನಾಭ ಕಾಂಚನ್(C.A) ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಶಾಂತಾರಾಮ್ ಶೆಟ್ಟಿ ಯವರಿಗೆ ಹಾಗೂ ಬಾರಕೂರು ರೋಟರಿಯ ಅಧ್ಯಕ್ಷ ಶ್ರೀಚರಣ್ ಶೆಟ್ಟಿ ಗಿಡಗಳ ಬಗ್ಗೆ ಅತೀ ಹೆಚ್ಚಿನ ಆಸಕ್ತಿ ,ಅಭಿಮಾನ ಹೊಂದಿರುವ ತಮ್ಮ ಪುತ್ರಿಗೆ ಔಷಧೀಯ ಲಕ್ಷ್ಮಣ ಫಲದ ಗಿಡವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ರೋಟರಿ ಬ್ರಹ್ಮಾವರದ ಅಧ್ಯಕ್ಷ ಹರೀಶ್ ಕುಂದರ್ ,ಬಾರಕೂರು ರೋಟರಿ ಯ ಅಧ್ಯಕ್ಷ ಚರಣ್ ಶೆಟ್ಟಿ, ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಶಾಂತರಾಮ ಶೆಟ್ಟಿ,ಮಾಜಿ ಪ್ರಾಂಶುಪಾಲ ಬಿ. ಸೀತಾರಾಮ್ ಶೆಟ್ಟಿ, ಟೀಮ್ ಅಭಿಮತದ ವಸಂತ ಗಿಳಿಯಾರ್ ಇವರು ಔಷಧೀಯ ವನ ಮತ್ತು ಅದರ ಪ್ರಯೋಜನಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ ,ಮುಂದಿನ ದಿನಗಳಲ್ಲಿ ಈ ಔಷದೀಯ ವನವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿಕೊಂಡು ಬರಬೇಕು ಎಂದು ತಿಳಿಸಿದರು.

ಬಾರ್ಕೂರು ಉದ್ದಗಲಕ್ಕೂ ಹಸಿರು ಪಸರಿಸಲಿ ಎಂಬ ಸದುದ್ದೇಶದಿಂದ ಲಕ್ಷ್ಮಣಫಲ, ರಕ್ತಚಂದನ, ಶ್ರೀ ಗಂಧದ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.ನಮ್ಮೂರು ಬಾರಕೂರು ಗ್ರೂಪ್ ಕಾರ್ಯನಿರ್ವಾಹಕ ಬಿ.ಗಣೇಶ್ ಶೆಟ್ಟಿ ವಂದಿಸಿದರು.

 
 
 
 
 
 
 
 
 
 
 

Leave a Reply