ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮಟ್ಟದ ಲಾಭಂಶ ವಿತರಣೆ

ಬಾರ್ಕೂರು : ವಲಯ ಮಟ್ಟದ ಲಾಭಂಶ ವಿತರಣೆ ಹಾಗೂ ತಂಡಗಳ ವಾರ್ಷಿಕೋತ್ಸವ ಹಾಗೂ ಆರ್ಥಿಕ ವರ್ಷದ ವಲಯದ 32ನೇ ತಂಡ ಉದ್ಘಾಟನಾ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಗಣೇಶ್ ಬಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ಸದಸ್ಯರು ಲಾಭಂಶ ಮೊತ್ತವನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ತಿಳಿಸಿ, ಎಲ್ಲಾ ಸದಸ್ಯರು ಯೋಜನೆಯ ಕಾರ್ಯಕ್ರಮಗಳ ಉಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿ ಶುಭ ಹಾರೈಸಿದರು.

ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತರಾಮ ಶೆಟ್ಟಿ ಮಾತನಾಡಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಯೋಜನೆ ಉತ್ತಮ ರೀತಿಯಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು. 

ಬಾರ್ಕೂರು ನಿವೃತ್ತ ಮುಖ್ಯ ಶಿಕ್ಷಕ ಸುಧಾಕರ್ ರಾವ್ ಮಾತನಾಡಿ ಕಷ್ಟಕಾಲದಲ್ಲಿ ಲಾಭಾಂಶ ಬಂದಿದ್ದು ಸದಸ್ಯರು ಬಂದ ಮೊತ್ತವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಜಯಾನಂದ್ ಮಾತನಾಡಿ ಎಲ್ಲರಿಗೂ ಉತ್ತಮ ಮೊತ್ತದ ಲಾಭಾಂಶ ಬಂದಿದ್ದು ಉತ್ತಮ ಕಾರ್ಯಗಳಿಗೆ ಮೊತ್ತ ಬಳಸುವಂತೆ ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ಬಾರ್ಕೂರು ಒಕ್ಕೂಟದ ಅಧ್ಯಕ್ಷೆ ಗೌರಿ ಪೂಜಾರಿ ಮಾತನಾಡಿ ಎಲ್ಲರಿಗೂ ಶುಭಹಾರೈಸಿದರು.

ಬ್ರಹ್ಮಶ್ರೀ, ಶ್ರೀ ಗುರು, ಮಂಜೂಷ, ಮಂಜುಶ್ರೀ, ಶ್ರೀ ಲಕ್ಷ್ಮಿ, ಶಿವಶಕ್ತಿ, ಶಿವಗಿರಿ, ವಿನಾಯಕ ತಂಡಗಳಿಗೆ ಲಾಭಂಶ ವಿತರಣೆ ಮಾಡಲಾಯಿತು ಹಾಗೂ ಎಂಟು ತಂಡಗಳ ವಾರ್ಷಿಕೋತ್ಸವ ನಡೆಸಲಾಯಿತು.

ವಲಯದ ಆರ್ಥಿಕ ವರ್ಷದ 32ನೇ ತಂಡದ ದಾಖಲಾತಿಯನ್ನು ಸದಸ್ಯರಿಗೆ ಮಾನ್ಯ ನಿರ್ದೇಶಕರು ಹಸ್ತಾಂತರ ಮಾಡಿದರು.

 ಕಾರ್ಯಕ್ರಮದಲ್ಲಿ ಬ್ರಹ್ಮವರ ತಾಲೂಕು ಯೋಜನಾಧಿಕಾರಿ ದಿನೇಶ್, ಸ್ವಾಗತ ಸಹಕಾರಿ ಸಂಘದ ನಿರ್ದೇಶಕ ಸುಬ್ರಮಣ್ಯ ಪೂಜಾರಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಶಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಾವರ ತಾಲೂಕು ಲೆಕ್ಕಪರಿಶೋಧಕ ಮಂಜುನಾಥ ಸ್ವಾಗತಿಸಿ, ಹೊಸಾಳ ಎ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಪೂರ್ಣಿಮಾ ತಂಡಗಳ ವರದಿ ವಾಚಿಸಿದರು , ವಂದಿಸಿದರು.ತಂಡದ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply