Janardhan Kodavoor/ Team KaravaliXpress
28.6 C
Udupi
Monday, December 5, 2022
Sathyanatha Stores Brahmavara

ಮಲ್ಪೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ  ಆರ್ಥಿಕ ಸಹಾಯ 

ಮಲ್ಪೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಶ್ರೀ ರಾಜೇಶ್ ಪೈ ಇವರಿಗೆ ಗಣೇಶೋತ್ಸವ ಸಮಿತಿಯ ಸದಸ್ಯರ ಸಹಕಾರದಿಂದ ನೀಡಲಾದ ಆರ್ಥಿಕ ಸಹಕಾರದ ಚೆಕ್ಕನ್ನು ಅವರ ಧರ್ಮಪತ್ನಿ ಫ್ಲೋರಾ ಇವರಿಗೆ ಹಸ್ತಾಂತರಿಸಲಾಯಿತು ಹಾಗು ಸಮಿತಿಯ ಮಾಜಿ ಕಾರ್ಯದರ್ಶಿ ಶ್ರೀ ನಾರಾಯಣ ಟಿ. ಕಿಣಿಯವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಕಾಂತಪ್ಪ ಕರ್ಕೇರ,  ಶ್ಯಾಮ ಅಮೀನ್, ಅಧ್ಯಕ್ಷ ಲಕ್ಷ್ಮಣ ಮೈಂದನ್, ಉಪಾಧ್ಯಕ್ಷ ಮಹೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿ ಶಿವರಾಮ ಕಲ್ಮಾಡಿ, ಕೋಶಾಧಿಕಾರಿ  ಸುರೇಶ್ ಕರ್ಕೇರ ಮತ್ತು ಸದಸ್ಯೆ ಪುಷ್ಪಾ ಶಶಿಧರ್ ಉಪಸ್ಥಿತರಿದ್ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!