ಉಡುಪಿಯಲ್ಲಿ ನಾಗರಿಕ ಸಮಿತಿಯಿಂದ ಉಚಿತ ತುರ್ತು ಆಮ್ಲಜನಕ ಸಿಲಿಂಡರ್ ಸೇವೆ

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳು, ಮನೆಯಲ್ಲಿ ಚಿಕಿತ್ಸೆ ಪಡೆಯುವರಿದ್ದಲ್ಲಿ, ರೋಗಿಗಳಿಗೆ ಆಮ್ಲಜನಕ ಸಿಲಿಂಡರ್ ತುರ್ತು ಬೇಕಾದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಚಿತವಾಗಿ ಆಮ್ಲಜನಕ ಸಿಲಿಂಡರ್ ಒದಗಿಸಲಿದೆ.

ಬಳಕೆದಾರರು ಆಕ್ಸಿಜನ್ ಮಾಸ್ಕ್ ಖರೀದಿಸಿ ಕೊಳ್ಳಬೇಕು. ಆಮ್ಲಜನಕ ಸಿಲಿಂಡರ್ 6 ರಿಂದ 7 ಗಂಟೆಗಳ ಕಾಲ ಬಳಸಬಹುದಾದ ಸಾಮರ್ಥ್ಯ ಹೊಂದಿದೆ. ಬಳಿಸಿದ ಬಳಿಕ ಸಿಲಿಂಡರ್ ಅನ್ನು ಹಿಂತಿರುಗಿಸಬೇಕು.

ತುರ್ತು ಅವಶ್ಯಕತೆ ಇದ್ದವರು ಉಡುಪಿ ನಗರದ, ಮಾರುಥಿ ವೀಥಿಕಾ- ಇಲ್ಲಿರುವ ನಾಗರಿಕ ಸಮಿತಿಯ ಜನಸಂಪರ್ಕ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 91649 01111 ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply