ಇಕೊ ಬ್ರಿಕ್ಸ್ ಕಾರ್ಯಾಗಾರ

ಕೊಡವೂರು: ‌ಹಳೆವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ (ರಿ).ಕೊಡವೂರು ಮತ್ತು ಸ್ನೇಹಿತ ಯುವ ಸಂಘ ಕಾನಂಗಿ ಇವರ ಸಂಯುಕ್ತಾಶ್ರಯದಲ್ಲಿ ನ.1ರಂದು ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ಪ್ಲಾಸ್ಟಿಕ್ ನ ಅತಿಯಾದ ಬಳಕೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ತ್ಯಾಜ್ಯ ಪ್ಲಾಸ್ಟಿಕ್ ನಿಂದ ಉಪಯುಕ್ತ ವಸ್ತು ಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡುವ ಇಕೊ ಬ್ರಿಕ್ಸ್ ಪರಿಸರ ಸ್ನೇಹಿ ಕಾರ್ಯಾಗಾರ ಜರುಗಿತು.

ಮಣಿಪಾಲ ಎಂ.ಐ.ಟಿ ಯ ಪ್ರಾಧ್ಯಾಪಕ ಡಾ.ನಾರಾ ಯಣ ಶೆಣೈ ಯವರು ಕಾರ್ಯಾಗಾರವನ್ನು ಉದ್ಘಾಟಿಸಿ ಇಡೀ ಜಗತ್ತಿನಲ್ಲಿ ಆಹಾರ ಉತ್ಪಾದನೆ ಮಾಡುವ ಏಕೈಕ ಅದ್ಭುತ ಶಕ್ತಿ ಇರುವುದು ಮರ ಗಿಡಗಳಿಗೆ ಮಾತ್ರ. ಜೀವ ರಾಶಿಗಳಿಗೆ ಆಹಾರ ನೀಡುವಂತಹ ಗಿಡ ಮರಗಳನ್ನು ಬೆಳೆಸಿ ಉಳಿಸುವುದರ ಮೂಲಕ ಉತ್ತಮ ಪರಿಸರ ವನ್ನು ಕಾಪಾಡಿಕೊಳ್ಳುವ ಶ್ರೇಷ್ಠ ಕೆಲಸದಲ್ಲಿ ನಾವೆಲ್ಲ ಕೈ ಜೋಡಿಸಬೇಕಾಗಿದೆ ಎಂದರು.

ನಗರಸಭಾ ಸದಸ್ಯ ವಿಜಯ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕೊಡವೂರು ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಶ್ರೀನಿವಾಸ ಬಾಯರಿ,ಸ್ನೇಹಿತ ಯುವ ಸಂಘದ ಅಧ್ಯಕ್ಷ ವಿವೇಕ್ ಸುವರ್ಣ ಉಪಸ್ಥಿತರಿದ್ದರು.

ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಉಡುಪಿ ಜಿಲ್ಲಾ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಜನಾರ್ದನ್ ಇವರನ್ನು ಮಾಜಿ ನಗರಸಭಾ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಸಮ್ಮಾನಿಸಿದರು. ಈ ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ವಿವಿಧ ಬಗೆಯ ಗಿಡಗಳನ್ನು ವಿತರಿಸಲಾಯಿತು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಕಾನಂಗಿ ವಂದಿಸಿದರು.

 
 
 
 
 
 
 
 
 

Leave a Reply