ಸಿಐಟಿಯು ಉಡುಪಿ ಜಿಲ್ಲಾ 7 ನೇ ಸಮ್ಮೇಳನ

ತಿರುಪತಿಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 25 -26 ರಂದು ಸಂಘಟಿಸಿದ್ದ ಎರಡು ದಿನಗಳ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ ದೇಶದ ಕಾರ್ಮಿಕರಿಗೆ ವರ್ಗದ ಬಗ್ಗೆ‌ ಕೇವಲ ಮೊಸಳೆ ಕಣ್ಣೀರು ಸುರಿಸಿದ ಪ್ರಹಸವಲ್ಲದೆ ಬೇರೆನೂ ಅಲ್ಲ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ‌ಕೆ.ಮಹಾಂತೇಶ್ ಟೀಕಿಸಿದರು.

ಅವರು ಬ್ರಹ್ಮಾವರ ದಲ್ಲಿ ಆಯೋಜಿಸಲಾಗಿದ್ದ ಸಿಐಟಿಯು ಉಡುಪಿ ಜಿಲ್ಲಾ 7 ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿ‌ದ ಅವರು ಮೊದಲ ಬಾರಿಗೆ ಕಾರ್ಮಿಕ ಸಂಘಗಳನ್ನು ಹೊರಗಿಟ್ಟು ತಿರುಪತಿಯಲ್ಲಿ ಕಾರ್ಮಿಕ ಸಮ್ಮೇಳನ ಆಯೋಜಿಸಿಲಾಗಿದೆ.
ಕೇಂದ್ರ ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು 2015 ರಿಂದ ತ್ರಿಪಕ್ಷೀಯ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಡೆಸಲು ನಡೆಸಿಯೇ ಇರಲಿಲ್ಲ.ಇದೀಗ ತಿರುಪತಿಯಲ್ಲಿ ನಡೆದ ಎರಡು ದಿನಗಳ ನಡೆದ ಸಮ್ಮೇಳನವು ಕೇವಲ ಕಾರ್ಮಿಕ ಮಂತ್ರಿಗಳು-ಅಧಿಕಾರಶಾಹಿಗಳ ಸಮಾವೇಶವಾಗಿತ್ತೆ ವಿನಃ ಕಾರ್ಮಿಕ ವರ್ಗದ ಸಂಕಟಗಳ ಕುರಿತಾಗಿ ಚರ್ಚಿಸುವ ವೇದಿಕೆಯಾಗಿರಲಿಲ್ಲ ಆದರೆ ಇದನ್ನು ಕಾರ್ಮಿಕ ಸಮ್ಮೇಳನ ‌ಎಂದು ಕರೆದು ಕೇಂದ್ರ ಸರ್ಕಾರ ಗೊಂದಲ‌ ಉಂಟು ಮಾಡಿದೆ ಇದು ಅತ್ಯಂತ ಖಂಡನಾರ್ಹ ಎಂದರು.

ಸಮ್ಮೇಳನವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿಗಳು ಕಾರ್ಮಿಕ ವರ್ಗವನ್ನು “ದೇಶದ ಶ್ರಮಶಕ್ತಿ” ಎಂದು ಹೊಗಳಿದ್ದು ಬಿಟ್ಟರೆ ಅವರ ಬದುಕಿನ ರಕ್ಷಣೆಗೆ ಬೇಕಾದ ಯಾವ ಆರ್ಥಿಕ ಭರವಸೆಗಳನ್ನು ಪ್ರಕಟಿಸಲಿಲ್ಲ. ದೇಶದಲ್ಲಿ 28 ಕೋಟಿ ಈ ಶ್ರಮ ಕಾರ್ಡುದಾರರು ನೋಂದಣಿಯಾಗಿದ್ದರೂ ಅವರಿಗೆ ರೂ 12 ರುಪಾಯಿಗಳ ಅಪಘಾತ ಪರಿಹಾರ ಬಿಟ್ಟರೆ ಮತ್ತೊಂದು ಪರಿಹಾರವಿಲ್ಲ. ಪ್ರಧಾನ ಮಂತ್ರಿ ಹೆಸರಲ್ಲಿ ಇರುವ “ಜನಧನ್ ಮಾನ್, ಸುರಕ್ಷಾ‌ಭೀಮ ಯೋಜನೆ,ಜೀವನ್ ಜ್ಯೋತಿ ಯೋಜನೆಗಳನ್ನು ಕೂಡ ರದ್ದು‌ಮಾಡಿ ಕೋಟ್ಯಾಂತರ ಅಸಂಘಟಿಸಿ ಕಾರ್ಮಿಕರಿಗೆ ಮೋಸ ಮಾಡಿದೆ ಆದರೆ ಇದೀಗ ಕಾರ್ಮಿಕ ಸಂಘಗಳನ್ನು ಹೊರಗಿಟ್ಟು ಕಾರ್ಮಿಕ ಸಮ್ಮೇಳನ ನಡೆಸಿ ಕಾರ್ಮಿಕರ ಪರವಾಗಿ ಮೊಸಳೆ ಕಣ್ಣೀರು ಸುರಿಸಿದೆ ಎಂದು ಆರೋಪಿಸಿದರು.

ಸಮ್ಮೇಳನದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ ದೇಶದ ಸಂಪತ್ತು ಉತ್ಪಾದಿಸುವ ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುತ್ತಿರುವ ಕೇಂದ್ರ ಸರ್ಕಾರ ಇದೀಗ ಖಾಸಗಿ ಕಾರ್ಪೊರೇಟ್‌ಗಳ ಕೈಚೀಲವನ್ನು ಕೊಬ್ಬಿಸಲು ಮತ್ತು ಕಾರ್ಮಿಕರ ಮೇಲೆ ಗುಲಾಮಗಿರಿಯ ಷರತ್ತುಗಳನ್ನು ಹೇರಲು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಹೊರಟಿದೆ ಇದರ ವಿರುದ್ದ ಕಾರ್ಮಿಕ ವರ್ಗ ಐಕ್ಯ ಚಳವಳಿ ನಡೆಸುತ್ತಿರುವ ಕಾರಣದಿಂದಾಗಿಯೇ ತಿರುಪತಿ ಕಾರ್ಮಿಕ ಸಮ್ಮೇಳನದಲ್ಲಿ ಅವುಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ ಎಂದರು.

ಸಮ್ಮೇಳನ ಅಧ್ಯಕ್ಷತೆಯನ್ನು ‌ಜಿಲ್ಲಾಧ್ಯಕ್ಷ ಕೆ.ಶಂಕರ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗಾರ್ ಕಳೆದ‌ಮೂರು ವರ್ಷಗಳ ಸಂಘಟನಾ, ಚಟುವಟಿಕೆಗಳ ವರದಿ ಮಂಡಿಸಿದರು. ಖಜಾಂಚಿ ಶಶಿಧರ ಗೊಲ್ಲ ಲೆಕ್ಕಪತ್ರ ಮಂಡಿಸಿದರು. ಇವುಗಳ ಆಧಾರದ‌ ಮೇಲೆ ಜಿಲ್ಲೆಯ ವಿವಿಧ ಸಂಘಗಳನ್ನು ಪ್ರತಿನಿಧಿಸಿ ಬಂದಿದ್ದ ವಿವಿಧ ಪ್ರತಿನಿಧಿಗಳು ಚರ್ಚೆ ನಡೆಸಿದರು. ಬಳಿಕಾ ಪ್ರಧಾನ ಕಾರ್ಯದರ್ಶಿ ಉತ್ತರಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ;
ಸಮ್ಮೇಳನ ‌ಮುಂದಿನ ಮೂರು ವರ್ಷದ ಅವಧಿಗೆ 17 ಜನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು.
ಅಧ್ಯಕ್ಷರಾಗಿ ಕೆ.ಶಂಕರ್ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಕಲ್ಲಾಗರ ಹಾಗೂ ಖಜಾಂಚಿಯಾಗಿ ಶಶಿಧರ್ ಗೊಲ್ಲ ಪುನರಾಯ್ಕೆಗೊಂಡರು.
ಉಪಾಧ್ಯಕ್ಷರುಗಳಾಗಿ ಬಾಲಕೃಷ್ಣ ಶೆಟ್ಟಿ,ಶೇಖರ ಬಂಗೇರ,ಬಲ್ಕೀಸ್, ಭಾರತಿ, ಉಮೇಶ್ ಕುಂದರ್,ಮಹಾಬಲ ವಡೇರಹೋಬಳಿ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಎಚ್ ನರಸಿಂಹ, ಕವಿರಾಜ್,ರಾಮ ಕಾರ್ಕಡ, ಚಂದ್ರಶೇಖರ ವಿ, ಸಂತೋಷ ಹೆಮ್ಮಾಡಿ, ಗಣೇಶ್ ತೊಂಡೆಮಕ್ಕಿ ಆಯ್ಕೆ ಮಾಡಲಾಯಿತು.

 
 
 
 
 
 
 
 
 
 
 

Leave a Reply