Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಚಿತ್ರಪಾಡಿ-ಗಿರಿಫ್ರೆಂಡ್ಸ್ ವತಿಯಿಂದ ವನಮಹೋತ್ಸವ, ಜಾಗೃತಿ ಅಭಿಯಾನ

ಕೋಟ: ಚಿತ್ರಪಾಡಿಯ ಗಿರಿ ಫ್ರೆಂಡ್ಸ್ ವತಿಯಿಂದ ವನಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಗಿಡ-ಮರ ಸಂರಕ್ಷಣೆ ಕುರಿತು ಜನ ಜಾಗೃತಿ ಕಾರ್ಯಕ್ರಮ ಭಾನುವಾರ ಚಿತ್ರಪಾಡಿ ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿ ನಿಟ್ಟೆ ಇಂಜಿನಿಯರಿoಗ್ ಕಾಲೇಜು ಇದರ ಪ್ರೊಫೆಸರ್ ಸುರೇಂದ್ರ ಶೆಟ್ಟಿ ವನಮಹೋತ್ಸವದ ಕುರಿತು ಸವಿವರವಾಗಿ ಮಾಹಿತಿ ನೀಡಿದರು, ಪಾರಂಪಳ್ಳಿ ಪರಿಸರದ ಪ್ರಗತಿಪರ ಕೃಷಿಕ ಪಿ.ರವೀಂದ್ರ ಐತಾಳ್, ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ಇದರ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಗಿಡ ನೆಡುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗಿರಿಫ್ರೆಂಡ್ಸ್ ಸಂಸ್ಥೆ ಅಧ್ಯಕ್ಷ ದಿನೇಶ್ ಆಚಾರ್,ಗೌರವ ಅಧ್ಯಕ್ಷ ರವಿ ಪೂಜಾರಿ, ಕಾರ್ಯದರ್ಶಿ ರಾಜೇಶ್ ಪೂಜಾರಿ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. 

ಕಾರ್ಯಕ್ರಮದ ನಂತರ ಗಿರಿ ಫ್ರೆಂಡ್ಸ್ನ ಸದಸ್ಯರು ಚಿತ್ರಪಾಡಿ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಗಿಡವನ್ನು ಹಂಚಿ ಅದರ ಮಹತ್ವವನ್ನು ತಿಳಿಸಿದರು.

ಚಿತ್ರಪಾಡಿಯ ಗಿರಿ ಫ್ರೆಂಡ್ಸ್ ವತಿಯಿಂದ ವನಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಪಾರಂಪಳ್ಳಿ ಪರಿಸರದ ಪ್ರಗತಿಪರ ಕೃಷಿಕ ಪಿ.ರವೀಂದ್ರ ಐತಾಳ್, ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ಇದರ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಗಿಡ ನೆಡುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗಿರಿಫ್ರೆಂಡ್ಸ್ ಸಂಸ್ಥೆ ಅಧ್ಯಕ್ಷ ದಿನೇಶ್ ಆಚಾರ್,ಗೌರವ ಅಧ್ಯಕ್ಷ ರವಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!