ಅಂತರಾಷ್ಟ್ರೀಯ ಚೈಲ್ಡ್‌ ಹೆಲ್ಪ್ ಲೈನ್ ಡೇ

ಉಡುಪಿ: ಚೈಲ್ಡ್‌ಲೈನ್-1098 ಉಡುಪಿ ಇವರ ವತಿಯಿಂದ ಅಂತರಾಷ್ಟ್ರೀಯ “ಚೈಲ್ಡ್‌ ಹೆಲ್ಪ್ ಲೈನ್ ಡೇ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಚರಿಸಲಾಯಿತು.‌ಜಿಲ್ಲಾಧಿಕಾರಿ ಜಿ. ಜಗದೀಶ್‌, ಕೋವಿಡ್-19, ಶಿಕ್ಷಣ ಅಭಿಯಾನ ಮತ್ತು ಚೈಲ್ಡ್‌ ಲೈನ್-1098 ಕ್ಕೆ ಸಂಬಂಧಿಸಿದ ಭಿತ್ತಿ ಪತ್ರವನ್ನು ಬಿಡುಗಡೆ ಮಾಡುವ ಮೂಲಕ ಸಿಬ್ಬಂದಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿದರು. 

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್‌ ಭಟ್ ಮಾತನಾಡಿ ಕೋರೊನಾ ಸಂದ್ದಿಗ್ದ ಸಮಯದಲ್ಲಿ ಮಕ್ಕಳು ಶಾಲೆಯಿಂದ ಹೋರಗಿದ್ದುಕೊಂಡು, ಅವರಿಗೆ

ಉಂಟಾಗುವ ತೊಂದರೆಗಳ ಬಗ್ಗೆ ಚೈಲ್ಡ್‌ ಲೈನ್‌ ನಿಂದ ಮಾಡಬೇಕಾದ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು, ಸಖಿ ಒನ್‌ ಸ್ಟಾಪ್‌ ಸೆಂಟರ್ ಹಾಗೂ ಮಣಿಪಾಲದ ಪ್ರಗತಿ ನಗರ, ಲೇಬರ್‌ ಕಾಲೋನಿ ಹಾಗೂ ನೇತಾಜಿ ನಗರಕ್ಕೆ ಭೇಟಿ ನೀಡಿ ಅಂತರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನದ ಮಹತ್ವದ ಬಗ್ಗೆ, ಚೈಲ್ಡ್‌ ಲೈನ್-1098 ಮತ್ತು ಕೋರೋನಾ ಕುರಿತು ಜನಜಾಗೃತಿ ಮೂಡಿಸಲಾಯಿತು.ಮತ್ತು ಭಿತ್ತಿಪತ್ರಗಳನ್ನು ಹಂಚಲಾಯಿತು. 

 ಚೈಲ್ಡ್‌ ಲೈನ್-1098 ಉಡುಪಿಯ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಮತ್ತು ಕೇಂದ್ರ ಸಂಯೋಜಕಿ ಕಸ್ತೂರಿ ಹಾಗೂ ಚೈಲ್ಡ್‌ ಲೈನ್-1098 ರ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply