ಜೆಸಿಐ ಉಡುಪಿ ಸಿಟಿ ವತಿಯಿಂದ ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೆಮ್ಮಣ್ಣು ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಉಡುಪಿ : ಕಾರ್ಮೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೆಮ್ಮಣ್ಣು ಹಾಗು ಜೆಸಿಐ ಉಡುಪಿ ಸಿಟಿ ಯ ಜೊತೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಮಾರಾಟ ವಿಭಾಗ ಹಿರಿಯ ಮಾರುಕಟ್ಟೆ ಪ್ರಬಂಧಕ ರಾಗಿರುವ ಜೆಸಿಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷ
ಜೆಸಿಐ ಇಂಡಿಯಾದ ವಲಯ 15 ರ ವಲಯ ಸಂಯೋಜಕ ಉದಯ್ ನಾಯ್ಕ ಮಾತನಾಡಿ ಶಾಲಾ ವಿದ್ಯಾರ್ಥಿ ಗಳನ್ನು ಕುರಿತು ಬಹಳ ಅರ್ಥಪೂರ್ಣವಾಗಿ
ವಿವರಿಸಿದರು . ಮರ ಗಿಡಗಳಿಗೆ ನೀರು ಪರಿಸರವನ್ನು ಶುಚಿಯಾಗಿಟ್ಟರೆ ಶುದ್ಧ ನೀರು ಆಹಾರ ಮತ್ತು ಆಮ್ಲಜನಕವನ್ನು ನೀಡಿ ಪರಿಸರ ಪ್ರಕೃತಿ ಮನುಷ್ಯನನ್ನು ಮಾತನಾಡಿಸುತ್ತದೆ . ಈ ಶಾಲೆಯ ಮಕ್ಕಳಿಗೆ ಪ್ರಾರಂಭದಲ್ಲಿಯೇ
ಪರಿಸರ ಮತ್ತು ವನಮಹೋತ್ಸವ ದಂತಹ ಅರ್ಥವನ್ನು ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಈ ಶಾಲೆಯಲ್ಲಿ ವಿದ್ಯೆ ಮತ್ತು ಮುಂದಿನ ಜೀವನದ ಶಿಕ್ಷಣ ದ ಆತ್ಮೀಯತೆ ಮಕ್ಕಳಲ್ಲಿ ಬೆಳೆಸುತ್ತಿದೆ ಪರಿಸರ ದಿನಾಚರಣೆಯ ಮಹತ್ವ ವಿವರಿಸಿದರು .
ಉದ್ಯಾವರ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜಿನ ಪ್ರೊಫೆಸರ್ ಜೆಸಿಐ ಉಡುಪಿ ಸಿಟಿ ಯ ಅಧ್ಯಕ್ಷ ಡಾ ವಿಜಯ್ ನೆಗಳೂರ್ ಮಾತನಾಡಿ ಈ ಶಾಲೆ ಮಕ್ಕಳಿಗೆ ಉತ್ತಮ ಕಾರ್ಯಕ್ರಮ ನೀಡುವಲ್ಲಿ ಮತ್ತು ಎಲ್ಲರೂ ಭಾಗವಹಿಸುವಿಕೆ ಖುಷಿಕೊಟ್ಟಿದೆ ಒಳ್ಳೆಯ ಕಾರ್ಯಕ್ರಮ ನಡೆಸುವಲ್ಲಿ ನಮಗೆ ಜವಾಬ್ದಾರಿ ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು
ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಎಂ ಸಿಲ್ವಿಯಾನ್ ಎ ಸಿ ಮಾತನಾಡಿ ಜೆಸಿಐ ಉಡುಪಿ ಸಿಟಿಯು ವಿದ್ಯಾರ್ಥಿಗಳಿಗೆ ಅಗತ್ಯ ವಾಗುವಂತಹ ಶೈಕ್ಷಣಿಕ ರೂಪಕ ಕಾರ್ಯಕ್ರಮಗಳನ್ನು ನೀಡುವಂತದ್ದು ನಮ್ಮ ಈ ವಿದ್ಯಾಸಂಸ್ಥೆಗೆ ಹೆಮ್ಮೆ ತರುವಂತದ್ದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು . ಶಾಲಾ ವಿದ್ಯಾರ್ಥಿಗಳಿಂದ ಪರಿಸರಕ್ಕೆ
ನೀಡುವಂತಹ ನೃತ್ಯರೂಪಕವನ್ನು ಮತ್ತು , ಎಲ್ ಇ ಡಿ ಪ್ರೊಜೆಕ್ಟರ್ ಮುಖಾಂತರ ಪರಿಸರಕ್ಕೆ ಅರ್ಥವನ್ನು ನೀಡುವಂತಹ ಚಿತ್ರ ರೂಪಕ ವಿಡಿಯೋವನ್ನು ಪ್ರದರ್ಶಿಸಲಾಯಿತು .
ಶಾಲಾ ಆವರಣದಲ್ಲಿ 25 ಹಣ್ಣಿನ,ಬೇವಿನ, ಔಷದಿ ಸಸ್ಯ ಗಳನ್ನು ನೆಡಲಾಯಿತು. ಶಾಲೆಗೆ ಅಗತ್ಯವಾಗಿರುವ ಈ ಸಸ್ಯ ಗಳನ್ನು ವಿತರಿಸಿದ ಜೆಸಿಐ ವಲಯ ನಿರ್ದೇಶಕ ರಾಘವೇಂದ್ರ ಪ್ರಭು ಕರ್ವಾಲ್ ಅವರಿಗೆ ಶುಭ ಹಾರೈಸಿದರು ۔ ಶಾಲಾ ಸಿಬ್ಬಂದಿ ಹಾಗೂ ಶಾಲೆಯ ಮಕ್ಕಳು ಉತ್ಸಾಹದೋದಿಗೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸದರು. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಿರಿಯ ತರಗತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ವಾಗತಿಸಿ ಧನ್ಯವಾದಗಳನ್ನು ತಿಳಿಸಿದರು ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ನಿರೂಪಿಸಿದರು

 
 
 
 
 
 
 
 
 
 
 

Leave a Reply