ಸಂಕಷ್ಟಕ್ಕೆ ಸ್ಪಂದಿಸುವ ಉದಾರತೆ ಇಂದಿನ ಅಗತ್ಯತೆ: ಡಾ! ನಿ.ಬೀ. ವಿಜಯ ಬಲ್ಲಾಳ್

ಡೀ ವಿಶ್ವವೇ ಕೊರೋನಾ ಮಹಾಮಾರಿಯಿಂದ ತತ್ತರಿಸಿರುವ ಈ ಕಾಲ ಘಟ್ಟದಲ್ಲಿ ಅನೇಕ ಸಂಘ- ಸಂಸ್ಥೆಗಳು, ದಾನಿಗಳು ಜನತೆಯ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು ಪ್ರಶಂಸನೀಯ. ಕೋವಿಡ್ ನಿಯಮ ಪಾಲನೆಯ ಜೊತೆಗೆ ಸಂಕಷ್ಟಕ್ಕೆ ಸ್ಪಂದಿಸುವ ಉದಾರತೆ ಇಂದಿನ ಅಗತ್ಯತೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.

ಅವರು ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಸಹಯೋಗದೊಂದಿಗೆ ದಾನಿಗಳ ನೆರವಿನಿಂದ ದೇವಳದ ವಠಾರದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಕರಾಟೆ ಶಿಕ್ಷಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು.

ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಕೇವಲ ಕರಾಟೆ ಅಭ್ಯಾಸಕ್ಕೆ ಮಾತ್ರ ಸೀಮಿತವಾಗಿರದೆ, ಸಮಾಜದ ಮುಂಚೂಣಿಯಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅನುಕರಣೀಯ. ಅಂಬಲಪಾಡಿ ದೇವಳದ ವತಿಯಿಂದಲೂ ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಗಿದೆ. ಸರಕಾರ ಮತ್ತು ಜನತೆಯ ಸಂಘಟಿತ ಪ್ರಯತ್ನದಿಂದ ಅತೀ ಶೀಘ್ರವಾಗಿ ಕೊರೋನಾ ಮುಕ್ತ ಸಮಾಜ ನಿರ್ಮಾಣವಾಗಲಿ ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರ ಆರಕ್ಷಕ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್, ದಾನಿಗಳಾದ ಕೆ.ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್(ರಿ.) ಪ್ರವರ್ತಕ ಕೆ.ಉದಯ ಕುಮಾರ್ ಶೆಟ್ಟಿ, ಸಾಫಲ್ಯ ಟ್ರಸ್ಟ್(ರಿ.) ಪ್ರವರ್ತಕಿ ನಿರುಪಮಾ ಶೆಟ್ಟಿ, ಶ್ರೀ ನಾರಾಯಣ ಗುರು ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ. ಉಪಾಧ್ಯಕ್ಷೆ ವಿಜಯ ಜಿ. ಬಂಗೇರ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಚೈತನ್ಯ ಸೋಷಿಯಲ್ ವೆಲ್ಫೇರ್ ಫೌಂಡೇಶನ್(ರಿ.) ಪ್ರವರ್ತಕ ಸುನಿಲ್ ಸಾಲ್ಯಾನ್,

ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಸಾಲ್ಯಾನ್ ಕಟಪಾಡಿ, ಬುಡೋಕಾನ್ ಕರಾಟೆ ಎಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ವಾಮನ್ ಪಾಲನ್, ಗೌರವ ಸಲಹೆಗಾರ ಪ್ರಕಾಶ್ ಮಲ್ಪೆ, ಉಡುಪಿ ನಗರ ಆರಕ್ಷಕ ಠಾಣೆಯ ಬೀಟ್ ಸಿಬ್ಬಂದಿ ಚೇತನ್ ಎಸ್., ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಬಾಳಿಗಾ ಫಿಶ್ನೆಟ್ಸ್ ಜನರಲ್ ಮೆನೇಜರ್ ಚಂದ್ರಶೇಖರ್ ಸುವರ್ಣ,

ಯುವಕ ಮಂಡಲ ಅಂಬಲಪಾಡಿ ಅಧ್ಯಕ್ಷ ಹರೀಶ್ ಪಾಲನ್ ಕಪ್ಪೆಟ್ಟು, ಸ್ವಸ್ತಿ ಕ್ರಿಕೆಟರ್ಸ್ ಅಂಬಲಪಾಡಿ ಅಧ್ಯಕ್ಷ ಅಜಿತ್ ಕಪ್ಪೆಟ್ಟು, ಕೋವಿಡ್ ಹೆಲ್ಪ್ ಡೆಸ್ಕ್ ಸೇವಾ ಕಾರ್ಯಕರ್ತ ಹರೀಶ್ ಅಂಬಲಪಾಡಿ, ಬಿ.ಕೆ.ಎಸ್.ಎ. ಉಪಾಧ್ಯಕ್ಷೆ ನಿಖಿತಾ, ಪ್ರಧಾನ ಕಾರ್ಯದರ್ಶಿ ಮೇಘ, ಸಂಘಟನಾ ಕಾರ್ಯದರ್ಶಿ ಪವನ್ ಕುಮಾರ್ ಮತ್ತು ಜಿಲ್ಲಾ ವ್ಯಾಪ್ತಿಯ ಕರಾಟೆ ಶಿಕ್ಷಕರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply