ಯುವಶಕ್ತಿಯಿಂದ ನವಸಮಾಜದ ನಿರ್ಮಾಣ ಡಾ ಮೋಹನ ಆಳ್ವ

ಇಂದು ದೇಶವು ಜಗತ್ತಿನ ಗಮನವನ್ನು ಸೆಳೆಯುತ್ತಿದೆ.ಇತರ ರಾಷ್ಟ್ರ ಗಳಿಗೆ ತನ್ನ ರಾಷ್ಟ್ರದ ಚಾರಿತ್ರ್ಯದ ಶ್ರೇಷ್ಠತೆಯನ್ನು ಎತ್ತಿತೋರಿದೆ. ಈ ನಿಟ್ಟಿನಲ್ಲಿ ಈ.ದೇಶದ ಅಮೂಲ್ಯ ಸಂಪತ್ತುಗಳೆನಿಸಿರುವ ಯುವ ಜನಾಂಗವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕಾಗಿದೆ. ಈ ವಿಶ್ವ ಚಳುವಳಿಯ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ಬಹಳ ಅವಶ್ಯವೆನಿಸಿದೆ. ಈ ಯುವ ಜನಾಂಗವು ಮತ್ತೆ ಜಗತ್ತಿನೆಲ್ಲೆಡೆ ಪರಿಚಯಿಸುವ ಅಂತರರಾಷ್ಟ್ರೀಯ ಜಾಂಬೂರಿ ಮೂಡಬಿದಿರೆಯಲ್ಲಿ ಬಹಳ ಸಂಖ್ಯೆಯಲ್ಲಿ ದಶಂಬರ ತಿಂಗಳಿನಲ್ಲಿ ಆಯೋಜಿಸಲಿದ್ದೇವೆ. ಹಾಗೆಯೇ ಇಂದು ಸನ್ಮಾನಿಸಲ್ಪಡುವ ಮಹನೀಯರು ಸಾರ್ಥಕ ಸೇವೆಯ ಆದರ್ಶವಂತರು ಸೇವೆಯನ್ನು ಪ್ರೀತಿಯಿಂದ ಮಾಡುವವರಿಗೆ ಆಶೀರ್ವಾದ ಗೌರವ ತನ್ನಿಂದ ತಾನೇ ದೇವರು ಆನುಗ್ರಹಿಸುವನು ಎಂದು ಮೈಸೂರು ವಿಭಾಗದ ಸ್ಕೌಟ್ಸ್ ಗೈಡ್ಸ್ ಆಯುಕ್ತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಎಂ ಮೋಹನ ಆಳ್ವರು ಹೇಳಿದರು.
ಅವರು ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ಗೈಡ್. ಆಯುಕ್ತೆ ಶ್ರೀಮತಿ ಜ್ಯೋತಿ ಜೆ ಪೈಯವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ. ಅತಿಥಿಗಳಾಗಿ ಭಾಗವಹಿಸಿ ತಿಳಿಸಿದರು. ಬಳಿಕ ಜಗನ್ನಾಥ ಪೈ ಹಾಗೂ ಜ್ಯೋತಿ ಜೆ ಪೈ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ಸನ್ಮಾನದ ಪ್ರೀತಿಗೆ ಪ್ರತಿಸ್ಪಂದನೆಯ ನುಡಿಗಳನ್ನಾಡಿದರು.

ಸಮಾರಂಭದ ಅಧ್ಯಕ್ಷ ತೆಯನ್ನು ಕಾರ್ಕಳ ಸ್ಕೌಟ್ಸ್. ಗೈಡ್ಸ್. ಘಟಕದ ಅಧ್ಯಕ್ಷ ಎಂ ಕೆ ವಿಜಯಕುಮಾರ್ ವಹಿಸಿದರು. ಮುಖ್ಯ. ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಪಿ ಶ್ರೀಧರ್ ಆಚಾರ್ ಭಾಗವಹಿಸಿ ಶುಭಾಶಂಸನೆಗೈದರು. ವೇದಿಕೆಯಲ್ಲಿ ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಯ ಸಂಚಾಲಕ ಎಸ್ ನಿತ್ಯಾನಂದ ಪೈ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ವೃಂದಾ ಶೆಣೈ ಉಡುಪಿ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷ ಎಡ್ವಿನ್ ಆಳ್ವ, ಜಿಲ್ಲಾ ಸ್ಕೌಟ್ ತರಬೇತು ಆಯುಕ್ತ ಆನಂದ ಅಡಿಗ, ಜಿಲ್ಲಾ ಗೈಡ್ ತರಬೇತು ಆಯುಕ್ತೆ ಶ್ರೀಮತಿ ಸಾವಿತ್ರಿ ಮನೋಹರ್, ಶೇಖರ್ ಕಲ್ಮಾಡಿ, ರಾಜ್ಯ ಸಹ ಸಂಘಟನಾ ಆಯುಕ್ತೆ ಸುಮನಶೇಖರ್, ಕಾರ್ಕಳ ಉಪಾಧ್ಯಕ್ಷ ಶ್ರೀ ಜಗದೀಶ್ ಹೆಗ್ಡೆ, ಸಹಾಯಕ ಜಿಲ್ಲಾ ಆಯುಕ್ತರಾದ ವೃಂದಾ ಹರಿಪ್ರಕಾಶ್, ಶೆಟ್ಟಿ ಗೀತಾ ಸುಧೀರ್ ಕಿಣಿ, ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಸತೀಶ್ ಶೆಟ್ಟಿ ಸ್ವಾಗತಿಸಿ ಸಹಕಾರ್ಯದರ್ಶಿ ಪ್ರಿಯಾ ಪ್ರಭು ಧನ್ಯವಾದವಿತ್ತರು. ಕಾರ್ಯದರ್ಶಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಇಂದಿರಾ ಪಿ ನಾಯಕ್ ಪ್ರಕಾಶ್ ಬೈಲೂರು ಸೂರ್ಯ ತೆಳ್ಳಾರ್ ಸಹಕರಿಸಿದರು

 
 
 
 
 
 
 
 
 

Leave a Reply