ಬಿಲ್ಲವ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಪ್ರಥಮ ಸಭೆ

ಗಂಗೊಳ್ಳಿ : ಒಂದು ಸಮುದಾಯದ ಹಿತರಕ್ಷಣೆಗಾಗಿ ಸಂಬಂಧಪಟ್ಟ ಎಲ್ಲರೂ ಒಮ್ಮನಸ್ಸಿನಿಂದ ಕೆಲಸವನ್ನು ಮಾಡಬೇಕು. ಸಮಗ್ರ ಪರಿಶ್ರಮದಿಂದಲೇ ಸಮುದಾಯದ ಹಿತ ರಕ್ಷಣೆ ಸಾಧ್ಯ ಎಂದು ಬಿಲ್ಲವ ಸಮುದಾಯದ ಹಿರಿಯ ಮುತ್ತ ಕುಂದರ್ ಅಭಿಪ್ರಾಯಪಟ್ಟರು.

ಗಂಗೊಳ್ಳಿಯ ಪಂಜುರ್ಲಿ ದೈವಸ್ಥಾನದ ವಠಾರದಲ್ಲಿ ನಡೆದ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಪ್ರಥಮ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ಜತ್ತನ್ ಮಾತನಾಡಿ, ಸಂಸ್ಥೆಗಳು ಸಮುದಾಯದ ಕೆಳವರ್ಗದ ಜನರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಜಾಗೃತಿಯನ್ನು ಮೂಡಿಸಿ ಸಮುದಾಯದ ಒಟ್ಟಾರೆ ಅಭಿವೃದ್ಧಿಗಾಗಿ ದುಡಿಯಬೇಕು ಎಂದು ಹೇಳಿದರು.

 ಈ ಸಭೆಯಲ್ಲಿ 2021-22ನೇ ಸಾಲಿನ ಸಮಿತಿಯನ್ನು ರಚಿಸಲಾಯಿತು, ಅಧ್ಯಕ್ಷರಾಗಿ ಜಿ. ಗೋಪಾಲ ಪೂಜಾರಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಿ. ಕೆ.ವೆಂಕಟೇಶ ಕೊಡೇರಿ ಮನೆ,ಕಾರ್ಯದರ್ಶಿಯಾಗಿ ಲಕ್ಷ್ಮಣ ಪೂಜಾರಿ ಜಿ ಎ. ಆರ್, ಜೊತೆ ಕಾರ್ಯದರ್ಶಿಯಾಗಿ ಅನಿಲ ಪೂಜಾರಿ ಖಜಾಂಜಿಯಾಗಿ ಮಂಜುರಾಜ್ ಗಂಗೊಳ್ಳಿ ಆಯ್ಕೆಯಾದರು. ಕಾರ್ಯಕಾರಿ ಮಂಡಳಿಯ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.

 
 
 
 
 
 
 
 
 
 
 

Leave a Reply