ಕಾರ್ಯಕರ್ತರಿಂದ ಬಿಜೆಪಿ ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಮೂಡಿದೆ : ಶಾಸಕ ಭಟ್  

ಭಾರತೀಯ ಜನತಾ ​ಪಕ್ಷವು  ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಜಕೀಯ ಸಂಘಟನೆ ಹಾಗು ಪರಿಣಾಮಕಾರಿ ಜನಪರ ಆಡಳಿತಾತ್ಮಕ ನಿಲುವುಗಳಲ್ಲಿ ಜನರ ಮನಸ್ಸಿನಲ್ಲಿ ಒಲವು ಗಳಿಸುತ್ತಿದ್ದಂತೆಯೇ ಪಕ್ಷದ ​ಕಾರ್ಯಕರ್ತರು ಕೂಡ ದೇಶಾದ್ಯಂತ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡು ಇಂದು ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಮೂಡಿ ಬರಲು ​ಕಾರಣಿಕರ್ತರಾಗಿದ್ದರೆ ಎಂದು ಶಾಸಕ ಕೆ. ರಘುಪತಿ ಭಟ್ ಅಭಿಮತ ವ್ಯಕ್ತ ಪಡಿಸಿದರು. 
 
ಅವರು ಉಡುಪಿ ಕಿನ್ನಿಮೂಲ್ಕಿ ವೀರಭದರ ದೇವಸ್ಥಾನದ ಸಭಾಂಗಣದಲ್ಲಿ ಭಾರತೀಯ ಜನತಾ ​ಪಕ್ಶ ಉಡುಪಿ ನಗರ ಇದರ ಆಶ್ರಯದಲ್ಲಿ ಕಿನ್ನಿಮೂಲ್ಕಿ ಶಕ್ತಿ​ ​ಕೇಂದ್ರ ಅಧ್ಯಕ್ಷರ ಹಾಗು ಅದರ ವ್ಯಾಪ್ತಿಯ ಬೂತ್ ಅಧ್ಯಕ್ಷರ ಪದಗ್ರಹಣ ​ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಿಷನ್ ಕಿನ್ನಿಮೂಲ್ಕಿ ಅಭಿಯಾನ​: ದಶಕಗಳಿಂದ ಕಾಂಗ್ರೆಸ್ ದಬ್ಬಾಳಿಕೆಯಿಂದ ರೋಸಿ ​ಹೋಗಿರುವ ಈ ಭಾಗದ ಪಕ್ಷದ ​ಕಾರ್ಯಕರ್ತರಿಗೆ ಹೊಸ ಚೈತನ್ಯ ತುಂಬುವ ಮಿಷನ್ ಕಿನ್ನಿಮೂಲ್ಕಿ ಅಭಿಯಾನ ಪ್ರಾರಂಭಿಸಿ ಹೊಸ ರೂಪು​ ​ರೇಷೆಗಳೊಂದಿಗೆ ಇಲ್ಲಿನ ಪಕ್ಷ ಸಂಘಟನೆಗೆ ಜೀವ ತುಂಬುವ​ ಬಗ್ಗೆ ​ ಗಂಬೀರ ಚಿಂತನೆಗಳು ನಡೆದಿವೆ. ಆ ನಿಟ್ಟಿನಲ್ಲಿ ಯುವ ಶಕ್ತಿಗಳು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕು ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ​ಹೇಳಿದರು. 
 
ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ನಗರ ಬಿಜೆಪಿ ಪ್ರದಾನ ಕರ‍್ಯರ‍್ಶಿಗಳಾದ ದಿನೇಶ್ ಅಮೀನ್, ಮಂಜುನಾಥ್ ಮಣಿಪಾಲ, ಮಹಿಳಾ ​ಮೋರ್ಚಾ ಅಧ್ಯಕ್ಷೆ ಸರೋಜಾ ಶೆಟ್ಟಿಗಾರ್, ತೆಂಕಪೇಟೆ ಮಹಾಶಕ್ತಿ ಕೇಂದ್ರ ಸಂಚಾಲಕ ಯಶವಂತ್​ ಸುವರ್ಣ, ಕಿನ್ನಿಮೂಲ್ಕಿ ಶಕ್ತಿ ಕೇಂದ್ರ ಸಂಚಾಲಕ ಅರವಿಂದ್ ಪದ್ಮಶಾಲಿ, ಸಹ ಸಂಚಾಲಕ  ನಿತೇಶ್.   
ಬೂತ್ ಅಧ್ಯಕ್ಷರುಗಳಾದ ಗುರುಪ್ರಸಾದ್, ಹರೀಶ್ ಶೆಟ್ಟಿಗಾರ್, ಜಿತೇನ್ ನಾಯಕ್, ಮುರಳೀಧರ್ ರಾವ್, ನಗರ ಕಾನೂನು ಮತ್ತು ಸಂಸದೀಯ  ಪ್ರಕೋಷ್ಠ ಸಂಚಾಲಕ ನಾಗರಾಜ್ ಕಿನ್ನಿಮೂಲ್ಕಿ, ಮಹಾಶಕ್ತಿ ಕೇಂದ್ರ ಯುವ ​ಮೋರ್ಚಾ ಅಧ್ಯಕ್ಷ ಚೇತನ್ ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ಹಿರಿಯ ನಾಯಕ ದೇವದಾಸ್ ಶೆಟ್ಟಿಗಾರ್ ​ಸಂಘಟಿಸಿ ಸಂಘಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಬಿಜೆಪಿ ​ಕಾರ್ಯದರ್ಶಿ  ಲಕ್ಷ್ಮಿ ಪಿ ಶೆಟ್ಟಿ ಕಿನ್ನಿಮೂಲ್ಕಿ ನಿರೂಪಿಸಿದರು.
 
 
 
 
 
 
 
 
 
 
 

Leave a Reply