ಬ್ರಹ್ಮಾವರ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ರೋಟರಾಕ್ಟ್ ಕ್ಲಬ್ ಗೆ ಚಾಂಪಿಯನ್ ಪಟ್ಟ

ಬ್ರಹ್ಮಾವರ : ರೋಟರಿ ಕ್ಲಬ್ ಬ್ರಹ್ಮಾವರದ ಆಶ್ರಯದಲ್ಲಿ ಅಲ್ಲಿನ ರೋಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಬ್ರಹ್ಮಾವರದ ರೋಟರಿ ಹಾಲ್ ನಲ್ಲಿ ಕಳೆದ ಶನಿವಾರ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮದಲ್ಲಿ ಅತ್ಯುತ್ತಮವಾದ ನಿರ್ವಹಣೆಯನ್ನು ನೀಡುವ ಮೂಲಕ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. 

ಎಂಟು ತಂಡಗಳು ಭಾಗವಹಿಸಿದ್ದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ವಿದ್ಯಾರ್ಥಿಗಳು ನಿರೂಪಣೆಯಲ್ಲಿ ಪ್ರಥಮ ಸ್ಥಾನ, ಪ್ರಹಸನದಲ್ಲಿ ದ್ವಿತೀಯ ಸ್ಥಾನ ಹಾಗೂ ನೃತ್ಯ ಮತ್ತು ಹಾಡುಗಾರಿಕೆಯಲ್ಲಿ ತೃತೀಯ ಸ್ಥಾನವನ್ನು ಗಳಿಸುವ ಮುಖೇನ ಅತಿ ಹೆಚ್ಚು ಬಹುಮಾನ ಗಳಿಸಿದ ತಂಡವಾಗಿ ಚಾಂಪಿಯನ್ ಶಿಪ್ ಪಡೆದರು. 

ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಅಮೀಕ್ಷಾ, ವೈಷ್ಣವಿ, ಶ್ರೇಯ ಖಾರ್ವಿ, ಪ್ರಭಾಕರ್, ಅಭಿಷೇಕ, ಆದಿತ್ಯ,ರಾಹುಲ್,ಮಹಿಮಾ, ರಂಜಿತಾ, ರಕ್ಷಿತಾ, ಪೂಜಾ, ಸಾಯಿರಾಜ್, ಹರೀಶ್, ಕಿರಣ್, ವಿನಾಯಕ, ದೀಕ್ಷಾ, ತ್ರಿಶಾ, ಸುಹಾನಾ, ಶ್ರೇಯಾ ಮತ್ತು ಸುಮಂತ್ ಭಾಗವಹಿಸಿದ್ದರು.

ಗಂಗೊಳ್ಳಿಯ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಜಿ, ಅರ್ಥಶಾಸ್ತ್ರ ಉಪನ್ಯಾಸಕಿ ಸುಗುಣ ಆರ್ ಕೆ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಸಹಕಾರ ನೀಡಿದ್ದರು. ಚಾಂಪಿಯನ್ ಪಟ್ಟವನ್ನು ಪಡೆದ ವಿದ್ಯಾರ್ಥಿಗಳ ತಂಡವನ್ನು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲೆ ಕವಿತಾ ಎಮ್ ಸಿ ಅಭಿನಂದಿಸಿದ್ದಾರೆ. 

 
 
 
 
 
 
 
 
 
 
 

Leave a Reply