ಮೆಕಾಲೇ ಶಿಕ್ಷಣ, ಪಠ್ಯಕ್ರಮದಿಂದ ಭಾರತೀಯರು ನಿರೀಕ್ಷಿತ ಮಟ್ಟಕ್ಕೆ ಏರಲು ಸಾಧ್ಯವಾಗಿಲ್ಲ~ಡಾ.ಕಲ್ಲಡ್ಕ ಪ್ರಭಾಕರ್ ಭಟ್    

ಬಂಟರ ಸಂಘಗಳ ಒಕ್ಕೂಟದಿಂದ 80 ಲಕ್ಷ ರೂ. ಮೌಲ್ಯದ ಸಹಾಯಹಸ್ತ ವಿತರಣೆ.
ಭಾರತೀಯ ಋಷಿ ಪರಂಪರೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಅವಶ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.  ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ.ಕ. ಮಂಗಳೂರು ವತಿಯಿಂದ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಭಾನುವಾರ ಜರುಗಿದ ವಿದ್ಯಾರ್ಥಿ ಸಹಾಯಧನ, ಗೃಹ ನಿರ್ಮಾಣ, ಮನೆ ರಿಪೇರಿ, ವೈದ್ಯಕೀಯ ವೆಚ್ಚ, ಮದುವೆ ಸಹಿತ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ದೇಶದಲ್ಲಿ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ಮೆಕಾಲೇ ಶಿಕ್ಷಣ, ಪಠ್ಯಕ್ರಮದಿಂದ ಭಾರತೀಯರು ನಿರೀಕ್ಷಿತ ಮಟ್ಟಕ್ಕೆ ಏರಲು ಸಾಧ್ಯವಾಗಿಲ್ಲ. ಸಾಮರಸ್ಯ ಹಾಗೂ ಪರಸ್ಪರ ಅವಲಂಬಿತ ಜೀವನ ನಡೆಸುವ ಶಿಕ್ಷಣ ಭಾರತೀಯ ಮೂಲ ಶಿಕ್ಷಣ ವ್ಯವಸ್ಥೆಯಲ್ಲಿದೆ.  ಈ ಶಿಕ್ಷಣ ಜಾರಿಯಾಗಬೇಕು. ಕೃಷಿ ಕುಟುಂಬದಿಂದ ಬಂದ ಬಂಟರು ಹುಟ್ಟೂರು ಹಾಗೂ ಮೂಲ ನಂಬಿಕೆಯನ್ನು ನೆನಪು ಬಿಡದೇ ಸಮಾಜಮುಖಿ ಜೀವನ ಸಾಗಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಿಗೆ ಕೋಟ್ಯಾಂತರ ರೂ. ಸಹಾಯ ನೀಡುವ ಬಂಟರು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮೆರೆಯುತ್ತಿದ್ದಾರೆ ಎಂದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಬಂಟ ಸಮುದಾಯದ ಎಲ್ಲರೂ ಒಟ್ಟಾಗಿ ಅವಕಾಶ ವಂಚಿತರ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸ್ವಾಗತಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉದ್ಯಮಿ ಕುಸುಮೋದರ ಶೆಟ್ಟಿ ಚೆಲ್ಲಡ್ಕ ಹಾಗೂ ಸರಿತಾ ಕೆ.ಡಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಕೆ. ರಘುಪತಿ ಭಟ್, ವಿ. ಸುನಿಲ್ ಕುಮಾರ್. 
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಇಂಟರ್ ನ್ಯಾಷನಲ್ ಬಂಟ್ಸ್ ವೆಲೇರ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಸುಧಾಕರ್ ಹೆಗ್ಡೆ, ರಂಜನಿ ಸುಧಾಕರ್ ಹೆಗ್ಡೆ, ಸಂತೋಷ ಶೆಟ್ಟಿ ಇನ್ನಾ, ಗುರ್ಮೆ ಸುರೇಶ್ ಶೆಟ್ಟಿ, ಅಜಿತ್ ಚೌಟ, ಸುಧಾಕರ್ ಶೆಟ್ಟಿ ಹುತ್ತುರ್ಕೆ, ಕೃಷ್ಣ ವೈ. ಶೆಟ್ಟಿ.
ರತ್ನಾಕರ ಶೆಟ್ಟಿ ಮುಂಡ್ಕೂರು, ಪುರುಷೋತ್ತಮ್ ಪಿ. ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಮಹೇಶ್ ಶೆಟ್ಟಿ ಪಡುಬಿದ್ರೆ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ರತ್ನಾಕರ ಶೆಟ್ಟಿ, ಸತೀಶ್ ಅಡಪ ಸಂಕಬೈಲು, ಸಂತೋಷ್ ಶೆಟ್ಟಿ ಪುನಾ, ಮನೋರಮಾ ಎನ್.ಬಿ. ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ಶಕುಂತಳಾ ಸದಾನಂದ ಶೆಟ್ಟಿ, ಮನೋಹರ್ ಶೆಟ್ಟಿ, ರವಿ ಶೆಟ್ಟಿ ಉಪಸ್ಥಿತರಿದ್ದರು. ಒಕ್ಕೂಟದ ಗೌರವ ಪ್ರಧಾನ ಕಾರ್ಯದರ್ಶಿ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಸಿದರು. ಅಶೋಕ್ ಪಕ್ಕಳ ನಿರೂಪಿಸಿದರು.
 
 
 
 
 
 
 
 
 
 
 
 
 
 
 
 
 
 
 
 
 

Leave a Reply