ಯುವ ಬಂಟರ ಸಂಘ (ರಿ.) ಕಂಬಳಕಟ್ಟ-ಕೊಡವೂರು ಇದರ 7ನೇ ವಾರ್ಷಿಕ ಅಧಿವೇಶನವನ್ನು ಶುಕ್ರವಾರ ಕಂಬಳಕಟ್ಟದ ಕಂಬಳಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಸಾಂಕೇತಿಕವಾಗಿ ನಡೆಸಲಾಯಿತು.
ಉಡುಪಿ ಬಂಟರ ಸಂಘದ ಗೌರವಾಧ್ಯಕ್ಷ ,ತುಳುಕೂಟ ಉಡುಪಿ ಇದರ ಅಧ್ಯಕ್ಷರಾಗಿರುವ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ ಇವರ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಸಿ, ಮಾತನಾಡಿ ಬಂಟರು ನಮ್ಮವರನ್ನು ಪ್ರೀತಿಸಿ ಬೇರೆ ಸಮಾಜದವರನ್ನು ಗೌರವದಿಂದ ಕಾಣುತ್ತೇವೆ.
ಕೋವಿಡ್ ನಂತಹ ಮಹಾಮಾರಿಯ ಸಂದರ್ಭದಲ್ಲಿ ಜಾತಿ ಮತ ಬೇಧವಿಲ್ಲದೆ ಎಲ್ಲರಿಗೂ ನಮ್ಮಿಂದಾದ ಸಹಾಯ ಹಸ್ತ ನೀಡಿದ್ದೇವೆ ಹಾಗೂ ಈ ಕೋರೋನವು ನಮ್ಮ ಆಡಂಬರ ಹಾಗೂ ದುಂದುವೆಚ್ಚದ ಜೀವನ ಶೈಲಿಯನ್ನು ಬದಲಿಸಿ ನಾವು ನಮ್ಮ ಕುಟುಂಬ ಸದಸ್ಯರೊಂದಿಗೆ ಇದ್ದು ನೆಮ್ಮದಿಯ ಬದುಕನ್ನು ನಡೆಸುವ ಜೀವನಪಾಠ ಕಲಿಯುವಂತೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಸುನಿಲ್ ಶೆಟ್ಟಿ ಮೈರೆಕ್ಯಾರು , ಮಾ|| ರೋಹಿತ್ ಶೆಟ್ಟಿ ಕಾನ ಇವರುಗಳಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿನ ಸಾಧನೆಗೆ ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅತಿಥಿಗಳಾದ ಅರುಣ್ ಶೆಟ್ಟಿ ಗಂಗೋತ್ರಿ ,ಅರುಣ್ ಕುಮಾರ್ ಶೆಟ್ಟಿ ಡಯಾನಾ & ಡಾಲ್, ಸಂಘದ ಗೌರವಾಧ್ಯಕ್ಷರುಗಳಾದ ಶ್ರೀ ಸಂತೋಷ್ ಶೆಟ್ಟಿ ಪಂಚರತ್ನ ,ಸ್ಮಿತಾವಿದ್ಯಾಧರ ಶೆಟ್ಟಿ ಗರ್ಡೆ, ಹಿರಿಯರಾದ ಜಗನ್ನಾಥ್ ಶೆಟ್ಟಿ ದೊಡ್ಡಮನೆ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಮಜಲುಮನೆ ಸ್ವಾಗತಿಸಿ ಪ್ರಸ್ತಾವನೆ ಗೈದರು. ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಆದಿಉಡುಪಿ ವಂದಿಸಿದರು. ಅಮೃತ್ ಶೆಟ್ಟಿ ಕಂಬಳಕಟ್ಟ ನಿರೂಪಿಸಿದರು.